ಮೈಸೂರು: ಮೈಸೂರು ವಿವಿ ಕ್ರಾಫರ್ಡ್ ಭವನ ದಲ್ಲಿ ನಡೆದ 106ನೇ ವಾರ್ಷಿಕ ಘಟಕೋತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಹೇಮಾ ನಂದೀಶ್ ಅವರಿಗೆ
ಪಿ ಎಚ್ ಡಿ ಪದವಿ ಪ್ರದಾನ ಮಾಡಲಾಯಿತು.
ಹೇಮಾ ಅವರು ರಾಜ್ಯಶಾಸ್ತ್ರ ವಿಭಾಗದಲ್ಲಿ ಕರ್ನಾಟಕ ವಿಧಾನಸಭೆಯಲ್ಲಿ ಮಹಿಳಾ ಪ್ರತಿನಿಧಿಕರಣ ಮತ್ತು ವಿವಾದ ಅಂಶಗಳು 1970 ರಿಂದ ಒಂದು ಅಧ್ಯಯನ ವಿಷಯವಾಗಿ ಮಹಾಪ್ರಬಂಧವನ್ನು ಕನ್ನಡ ಭಾಷೆಯಲ್ಲಿ ಸಿದ್ಧಪಡಿಸಿ ಮಂಡಿಸಿದ್ದರು.
ಈ ಪ್ರಬಂಧವನ್ನು ಮೈಸೂರು ವಿಶ್ವವಿದ್ಯಾಲಯ ಅಂಗೀಕರಿಸಿ ಅವರಿಗೆ ಪಿ ಎಚ್ ಡಿ ಪದವಿ ನೀಡಿದೆ.
ಘಟಿಕೋತ್ಸವ ಕಾರ್ಯಕ್ರಮದಲ್ಲಿ ರಾಜಪಾಲರಾದ ಥಾವರಚಂದ್ ಗೆಹಲೋಟ್, ಇಸ್ರೋ ಮಾಜಿ ಅಧ್ಯಕ್ಷ ಎಸ್. ಸೋಮನಾಥ್, ಸಚಿವರಾದ ಎಂ ಸಿ ಸುಧಾಕರ್,ಕುಲಪತಿ ಪ್ರೊ.ಎನ್. ಕೆ.ಲೋಕನಾಥ್ ಮತ್ತಿತರರ ಸಮ್ಮುಖದಲ್ಲಿ ಹೇಮಾ ನಂದೀಶ್ ಪದವಿ ಸ್ವೀಕರಿಸಿದರು.
ನಂತರ ಎಲ್ಲ ಗಣ್ಯರು ಹೇಮಾ ಅವರಿಗೆ ಶುಭ ಕೋರಿದರು.
