ಮೈಸೂರು: ಜಗಳ ಬಿಡಿಸಿ ಬುದ್ದಿ ಹೇಳಿದ್ದಕ್ಕೆ ಯುವಕರ ಗುಂಪು ಪಾಪ ಹೋಂಗಾರ್ಡ್ ಮೇಲೆ ಹಲ್ಲೆ ನಡೆಸಿ ಕೊಲ್ಲಲು ಯತ್ನಿಸಿದ ಹೇಯ ಘಟನೆ ಜಿಲ್ಲೆಯ ನಂಜನಗೂಡಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಜಾತ್ರೆ ವೇಳೆ ನಡೆಯುತ್ತಿದ್ದ ಜಗಳ ಬಿಡಿಸಿದ ತಪ್ಪಿಗೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ಹೋಂಗಾರ್ಡ್ ರಂಗಸ್ವಾಮಿ ನಾಯಕ ಅವರು ಪೆಟ್ಟು ತಿಂದಿದ್ದಾರೆ.ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ರಂಗಸ್ವಾಮಿ ನಾಯಕ ಅವರ ಮೇಲೆ ಹಲ್ಲೆ ನಡೆಸಿದ ಯುವಕರ ಗುಂಪು ಬೈಕ್ ಗೆ ಬೆಂಕಿ ಹಚ್ಚಿ ಸಜೀವ ದಹನಕ್ಕೂ ಯತ್ನಿಸಿದ ಹೇಯ ಘಟನೆ ಏಚಗುಂಡ್ಲ ಗ್ರಾಮದಲ್ಲಿ ನಡೆದಿದೆ.
ರಂಗಸ್ವಾಮಿ ನಾಯಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಬೈಕ್ ಸುಟ್ಟು ಹೋಗಿದೆ, ಆದರೆ ಇಷ್ಟೆಲ್ಲಾ ಆದರೂ ಪೊಲೀಸ್ ಠಾಣೆಯಂದ ನಿಯೋಜನೆಗೊಂಡ ಕರ್ತವ್ಯ ನಿರತ ಹೋಂಗಾರ್ಡ್ ಮೇಲೆ ಹಲ್ಲೆಯಾದರೂ ಪ್ರಕರಣ ದಾಖಲಿಸದೇ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿದೆ.
