ಮೈಸೂರು: ಮಹಾ ಶಿವರಾತ್ರಿ ಪ್ರಯುಕ್ತ ಯಾದವಗಿರಿ, ಶ್ರೀ ಉತ್ತರಾದಿಮಠದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿರುವ ಶ್ರೀ ಸತ್ಯಪ್ರೋಮೋದ ಕಲ್ಯಾಣಮಂಟಪದಲ್ಲಿ ಮಹಾ ಮೃತ್ಯುಂಜಯ ಹೋಮವನ್ನು ನೆರವೇರಿಸಲಾಯಿತು.
ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಮಹಾ ಮೃತ್ಯುಂಜಯ ಹೋಮದ ವೇಳೆ ಶಾಸಕರಾದ ಟಿ. ಎಸ್ ಶ್ರೀವತ್ಸ, ವಿಪ್ರ ಮುಖಂಡರಾದ ಎನ್. ಎಂ ನವೀನ್ ಕುಮಾರ್, ಉತ್ತರಾದಿಮಠದ ವ್ಯವಸ್ಥಾಪಕರಾದ ಪಂಡಿತ ಅನಿರುದ್ದಾಚಾರ್ ಪಾಂಡುರಂಗಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಎಸ್ ಬಿ ವಾಸುದೇವ ಮೂರ್ತಿ, ಬುಜಂಗ, ಆಂಜನೇಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪಕರಾದ ಶ್ರೀ ಪ್ರಮೋದಾಚಾರ್ಯ, ಎಸ್ ಬಿ ನಾಗರಾಜ್, ಸುಮಾ, ಹರಿಣಿ ಹಾಗೂ ಭಕ್ತರು ಪಾಲ್ಗೊಂಡು ಶಿವನಾಮಸ್ಮರಣೆ ಮಾಡಿದರು.
