ಮೈಸೂರು: ಇದೇ ಶನಿವಾರ ಬೆಳಗ್ಗೆ ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳು ಮಹಾರಾಜ ಕಾಲೇಜು ಮೈದಾನದಲ್ಲಿ ಸಂಕಲ್ಪಿಸಿರುವ ಶ್ರೀ ಹನುಮಾನ್ ಚಾಲೀಸ ಪಾರಾಯಣ ಮಹಾ ಯಜ್ಞವನ್ನು ಯಶಸ್ವಿಗೊಳಿಸಬೇಕೆಂದು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ಮನವಿ ಮಾಡಿದರು.
ಗುರುವಾರ ಡಿ ಟಿ ಎಸ್ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಸುದ್ದಗೋಷ್ಠಿಯಲ್ಲಿ ಫೌಂಡೇಶನ್ ಅಧ್ಯಕ್ಷರೂ ಆದ ಡಿ.ಟಿ.ಪ್ರಕಾಶ್ ಮಾತನಾಡಿದರು.
ಈ ಹಿಂದೆ ಸುಮಾರು 10 ವರ್ಷದ ಕೆಳಗೂ ಸಹ ಇದೇ ರೀತಿ ಹನುಮಾನ್ ಚಾಲೀಸ ಸಾಮೂಹಿಕ ಪಾರಾಯಣವನ್ನು ಯಶಸ್ವಿಯಾಗಿ ನೆರವೇರಿಸಿದ್ದರು,
ಆಗ ಸುಮಾರು 30 ಸಾವಿರ ಭಕ್ತರು ಪಾಲ್ಗೊಂಡು ಅವರ ಸತ್ಪಲವನ್ನು ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.
ಲೋಕಕಲ್ಯಾಣರ್ಥವಾಗಿ ಏರ್ಪಡಿಸಿರುವ ಶ್ರೀ ಹನುಮಾನ್ ಚಾಲೀಸ ಸಾಮೂಹಿಕ ಪಾರಾಯಣವನ್ನು ಸ್ತುತಿಸುವವರಿಗೆ ಅನೇಕ ಫಲಗಳು ಮತ್ತು ಜೀವನ ಶಕ್ತಿ ದೊರಕುವುದರಲ್ಲಿ ಸಂಶಯವಿಲ್ಲ ಹೀಗೆಂದು ಎಲ್ಲಾ ಪುರಾಣಗಳಲ್ಲಿಯೂ ಹೇಳುತ್ತದೆ, ಸ್ವತ ಅನುಭವಿಸಿ ಫಲ ಪಡೆದುಕೊಂಡಿರುವ ಅನೇಕ ಭಕ್ತಾದಿಗಳೂ ಹೇಳಿದ್ದಾರೆ ಎಂದು ನುಡಿದರು.
ಮುಖ್ಯಪ್ರಾಣ ಭಗವಂತ ಶ್ರೀ ಹನುಮಂತ ಶ್ರದ್ದಾ ಭಕ್ತಿಯಿಂದ ಶ್ರೀ ರಾಮನನ್ನು ಪೂಜಿಸಿ ಬೃಹತ್ ಶಕ್ತಿ ಮತ್ತು ಶಕ್ತಿಯುತ್ತ ಪುಣ್ಯ ಫಲಗಳನ್ನು ಪಡೆದುಕೊಂಡನು ಆದುದರಿಂದ ಹನುಮಾನ್ ಚಾಲೀಸಾ ವನ್ನು ಪಾರಾಯಣಿಸುವ ಮೂಲಕ ಆ ಭಗವಂತನನ್ನು ಭಕ್ತಿಯಿಂದ ಪೂಜಿಸಿದರೆ ಲೋಕದಲ್ಲಿ ನಮ್ಮ ಸಮುದಾಯದವರು ಹಾಗೂ ಬೇರೆಲ್ಲಾ ಸಮುದಾಯದವರು ಸಹ ಅನೇಕ ಫಲಗಳನ್ನು ಪಡೆದುಕೊಂಡು ಜೀವನ್ ಮುಕ್ತರಾಗುವವರು ಎಂದು ಡಿ.ಟಿ.ಪ್ರಕಾಶ್ ಹೇಳಿದರು.
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳು ನಮ್ಮ ಸಮುದಾಯವಲ್ಲದೆ, ಇಡೀ ವಿಶ್ವಕ್ಕೆ ಒಳಿತಾಗಲೆಂದು ಮಾಡುತ್ತಿರುವ ಈ ಕಾರ್ಯಕ್ರಮಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಹಿಂದೂ ಧರ್ಮದ ಒಗ್ಗಟ್ಟನ್ನು ಪ್ರದೇಶಿಸೋಣ ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಮಹಾಪೌರರಾದ ಶಿವಕುಮಾರ್, ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಗೋಪಾಲ್ ರಾವ್, ನಗರ ಪಾಲಿಕೆ ಮಾಜಿ ಸದಸ್ಯರಾದ ಬಿ ವಿ ಮಂಜುನಾಥ್, ಶ್ರೀರಾಮ ಸೇನೆ ಅಧ್ಯಕ್ಷರಾದ ಸಂಜಯ್, ಮುಖಂಡರಾದ ಬೈರತಿ ಲಿಂಗರಾಜು ಉಪಸ್ಥಿತರಿದ್ದರು.
