ಉಡುಪಿ: ಉಡುಪಿ ಜಿಲ್ಲೆಯ ಶಂಕರ್ ಪುರದ ಸರ್ವಕಲಾ ಸೇವಾ ಟ್ರಸ್ಟ್ ವತಿಯಿಂದ ಮಣಿಪಾಲ್ ನ ಎಂಜಿಎಂ ಕಾಲೇಜು ವಿದ್ಯಾರ್ಥಿಗಳಿಗೆ ಎನ್ಎಸ್ಎಸ್ ಶಿಬಿರದ ಅಂಗವಾಗಿ ಒಂದು ದಿನದ ಕೃಷಿ ತರಬೇತಿ ನೀಡಲಾಯಿತು.
ತರಬೇತುದಾರರಾದ ಕೃಷಿ ತಜ್ಞ ಡಾ. ಜೋಸೆಫ್ ಲೋಬೊ ಪರಿಸರಕ್ಕೆ ಕೃಷಿಯ ಮಹತ್ವ ಹಾಗೂ ತಾರಸಿ ಕೃಷಿಯ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರತ್ಯಕ್ಷಿಕೆ ಹಾಗೂ ವಿವರಣೆಯನ್ನು ನೀಡಿದು.
ನೂರಕ್ಕೂ ಅಧಿಕ ವಿದ್ಯಾರ್ಥಿಗಳೊಟ್ಟಿಗೆ ಅಧ್ಯಾಪಕರು, ಎನ್ ಎಸ್ ಎಸ್ ಅಧಿಕಾರಿಗಳು, ಸರ್ವ ಕಲಾ ಸೇವಾ ಟ್ರಸ್ಟ್ ಅಧ್ಯಕ್ಷರಾದ ನೀಮ ಲೋಬೊ ಹಾಜರಿದ್ದರು.
ಈ ವೇಳೆ ವಿದ್ಯಾರ್ಥಿಗಳಿಗೆ ಟ್ರಸ್ಟ್ ವತಿಯಿಂದ ಪ್ರಮಾಣ ಪತ್ರವನ್ನು ನೀಡಲಾಯಿತು.
