ಯಳಂದೂರು: ತಾಲ್ಲೂಕಿನ ಕೆಸ್ತೂರು ಗ್ರಾಮದಲ್ಲಿ ಶ್ರೀಸುಡುಗಾಡಮ್ಮ ಸೇವಾ ಸಮಿತಿ ಸದಸ್ಯರು ದೇವಸ್ಥಾನದ ಮುಂಭಾಗ ಶಾಸಕ ಎ ಆರ್ ಕೃಷ್ಣಮೂರ್ತಿ ಅವರನ್ನು ಮಂತ್ರಿ ಮಾಡಬೇಕೆಂದು ಒತ್ತಾಯಿಸಿದರು.
ಈ ವೇಳೆ ಸೇವಾ ಸಮಿತಿ ಅಧ್ಯಕ್ಷ ಕೆ ಪಿ ರಾಮಕೃಷ್ಣ ಅವರು ಮಾತನಾಡಿ, ಶಾಸಕ ಎ ಆರ್ ಕೃಷ್ಣಮೂರ್ತಿ ಅವರು ಹಳೆ ಮೈಸೂರು ಭಾಗದ ಪ್ರಭಾವಿ ದಲಿತ ನಾಯಕರು ಹಾಗೂ ಮಾಜಿ ರಾಜ್ಯಪಾಲರು, ಮಾಜಿ ಅರಣ್ಯ ಸಚಿವರಾದ ದಿವಂಗತ ಬಿ ರಾಚಯ್ಯ ನವರ ಸುಪುತ್ರರು,ರಾಜಕೀಯ ಹಿನ್ನಲೆಯಿಂದ ಬಂದವರಾಗಿದ್ದಾರೆ ಕ್ಷೇತ್ರ ಮತ್ತು ಜಿಲ್ಲೆಯ ಅಭಿವೃದ್ಧಿಗೋಸ್ಕರ ಸದಾ ಶ್ರಮಿಸುತ್ತಿದ್ದಾರೆ ಮೂರು ಬಾರಿ ಶಾಸಕರಾಗಿ ಜನರ ನಾಡಿಮಿಡಿತವನ್ನು ಅರಿತಿದ್ದಾರೆ ಹಾಗಾಗಿ ಅವರಿಗೆ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನವನ್ನು ನೀಡಬೇಕೆಂದು ಕಾಂಗ್ರೆಸ್ ಪಕ್ಷದ ಗರಿಷ್ಟ ರಲ್ಲಿ ಮನವಿ ಮಾಡಿದರು.
ಹಿರಿಯ ಮುಖಂಡ ನಾಗಣ್ಣ ಮಾತನಾಡಿ, ಶಾಸಕ ಎ ಆರ್ ಕೃಷ್ಣಮೂರ್ತಿ ಅವರು ಮೂರು ಬಾರಿ ಶಾಸಕರಾಗಿ ಕ್ಷೇತ್ರಕ್ಕೆ ಸುಮಾರು 510 ಕೋಟಿ ಗೂ ಹೆಚ್ಚು ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ ಅವರ ಅವಧಿಯಲ್ಲಿ ಯಳಂದೂರು ಪಟ್ಟಣದಲ್ಲಿ 100 ಬೆಡ್ ಆಸ್ಪತ್ರೆ, ಕೊಳ್ಳೇಗಾಲದಲ್ಲಿ 200 ಬೆಡ್ ಉಪವಿಭಾಗಿಯ ಆಸ್ಪತ್ರೆ, ಬಿಳಿಗಿರಿರಂಗನ ಬೆಟ್ಟದಲ್ಲಿ ಕಮರಿ ಮತ್ತು ಮೆಟ್ಟಿಲು ನಿರ್ಮಾಣ, ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣ ಕಾಮಗಾರಿಗಳು, ಮೆಲ್ಲಹಳ್ಳಿ ಗೇಟ್ ಬಳಿ ಅಗ್ನಿ ಶಾಮಕ ದಳ ಕಚೇರಿ ಮಂಜೂರು, ಕೆಸ್ತೂರು, ಹೊಂಗನೂರು, ಕುದೇರು ಇಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಮಂಜೂರು.ಇನ್ನೂ ಅನೇಕ ಜನಪರ ಕಾರ್ಯಗಳನ್ನು ಮಾಡಿ ಕ್ಷೇತ್ರದ ಜನರ ಮೆಚ್ಚುಗೆ ಪಾತ್ರರಾಗಿದ್ದಾರೆ ಅವರು ಮಂತ್ರಿ ಸ್ಥಾನಕ್ಕೆ ಅರ್ಹರಾಗಿದ್ದಾರೆ ಎಂದು ತಿಳಿಸಿದರು.
ಕಾಂಗ್ರೇಸ್ ಹಿರಿಯ ಮುಖಂಡ ಬಿ ನಾಗರಾಜು ಮಾತನಾಡಿ ಶಾಸಕ ಎ ಆರ್ ಕೃಷ್ಣಮೂರ್ತಿ ಅವರು ಅನುಭವಿ ರಾಜಕಾರಣಿ ಹಾಗೂ ರಾಜ್ಯದಲ್ಲಿಯೇ ಅತ್ಯಧಿಕ ಮತಗಳನ್ನು ಪಡೆದ ಮೊದಲ ದಲಿತ ಶಾಸಕರು.ಅಭಿವೃದ್ಧಿ ವಿಷಯದಲ್ಲಿ ದೂರದೃಷ್ಟಿಯುಳ್ಳವರು.ಹಳೆ ಮೈಸೂರು ಭಾಗದಲ್ಲಿ ಅತೀ ಹೆಚ್ಚು ಜನಪ್ರಿಯ ಶಾಸಕರಾಗಿದ್ದಾರೆ. ಮೂರು ವರ್ಷದ ಅವಧಿಯಲ್ಲಿ ಎಲ್ಲಾ ವರ್ಗದ ಸಮುದಾಯ ಭವನಗಳಿಗೆ ಅನುದಾನ ನೀಡಿ ಎಲ್ಲಾ ವರ್ಗದವರು ಮೆಚ್ಚುವಂತರಾಗಿದ್ದಾರೆ ಇವರಿಗೆ ಮಂತ್ರಿ ಸ್ಥಾನವನ್ನು ನೀಡಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ಊರಿನ ಯಜಮಾನರಾದ ಬಸವಣ್ಣ ಮುಖಂಡರಾದ ಮಾದಪ್ಪ ಹಾಗೂ ಗ್ರಾಮಸ್ಥರು ಹಾಜರಿದ್ದರು
