ಮೈಸೂರು: ಬೇಸಿಗೆ ರಜೆ ಮುಗಿದು ಸರ್ಕಾರಿ ಶಾಲೆಗಳು ಪ್ರಾರಂಭವಾಗಿವೆ ಮೊದಲ ದಿನವೇ ಹರ್ಷದಿಂದ ಶಾಲೆಗೆ ಮಕ್ಕಳಿಗೆ ಶಾಸಕ ಹರೀಶ್ ಗೌಡರು ಹೂವು ಸಿಹಿ ಹಾಗೂ ಪಠ್ಯಪುಸ್ತಕ ನೀಡಿ ಸ್ವಾಗತಿಸಿದರು.

ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಮಹಾರಾಣಿ ಜೂನಿಯರ್ ಶಾಲೆಯಲ್ಲಿ ಪ್ರಸಕ್ತ ಸಾಲಿನ ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಶಾಲೆಯ ವಿದ್ಯಾರ್ಥಿಗಳಿಗೆ
ಹೂವು ಸಿಹಿ ಹಾಗೂ ಪಠ್ಯಪುಸ್ತಕವನ್ನು
ನೀಡಿ ಶುಭ ಹಾರಿಸಿದರು.

ಈ ವೇಳೆ ಮಾತನಾಡಿದ ಹರೀಶ್ ಗೌಡ ಅವರು,ಜ್ಞಾನದ ಬೆಳಕು ಹೆಚ್ಚಾಗಲಿ
ಶಿಕ್ಷಣವೇ ಶಕ್ತಿ,ಶಿಕ್ಷಣ ಕಲಿತ ವ್ಯಕ್ತಿ ತನ್ನ ಜೀವನವನ್ನು ಉತ್ತಮವಾಗಿ ನಿರ್ವಹಿಸಿ, ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡುವರು ಎಂದು ತಿಳಿಸಿದರು.
ಶಾಲೆಗಳು ಶಿಕ್ಷಣ ನೀಡುವ ಕೇಂದ್ರಗಳಾಗಿದ್ದು, ಅರ್ಹ ವಯಸ್ಸಿನ ಮಕ್ಕಳನ್ನು ಶಾಲೆಗೆ ಸೇರಿಸಿ, ನಿಯಮಿತವಾಗಿ ಶಾಲೆಗೆ ಕಳುಹಿಸಬೇಕು ಎಂದು ಹೇಳಿದರು.

ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉಚಿತ ಸಮವಸ್ತ್ರ,ಉಚಿತ ಪಠ್ಯಪುಸ್ತಕ, ಶೊ-ಸಾಕ್ಸ್ ಬಿಸಿಯೂಟ ನೀಡಲಾಗುತ್ತಿದ್ದು ಇದರ ಪ್ರಯೋಜನ ಪಡೆಯಬೇಕೆಂದು ಹರೀ್ ಗೌಡ ಮಕ್ಕಳಿಗೆ ಸಲಹೆ ನೀಡಿದರು.
ಜೂನಿಯರ್ ಮಹಾರಾಣಿ ಕಾಲೇಜು ಪ್ರಾಂಶುಪಲರಾದ ಸೋಮಣ್ಣ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಮಹಾದೇವ್,ಸದಸ್ಯರಾದ,ಚೆಲುವರಾಜ್, ನವೀನ್, ರವಿಚಂದ್ರ,ಉಪ ಪ್ರಶುಪಲರಾದ ಚೆಲುವಂಬ,ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್, ದೇವರಾಜ ಬ್ಲಾಕ್ ಅಧ್ಯಕ್ಷ,ರಮೇಶ್ ರಾಯಪ್ಪ, ಸಂದೀಪ್,ಮಾದೇವ್, ಚೆಲುವ, ಕುಮಾರ್, ಹರೀಶ್ ಗೌಡ, ಸಂತೋಷ್, ನಿತಿನ್, ನವೀನ್, ಶ್ರೀನಿವಾಸ್ ,ಹರ್ಷ, ನಂಜುಂಡಿ, ಎಸ್ ಎನ್ ರಾಜೇಶ್, ಮಂಜುನಾಥ್, ಮತ್ತಿತರರು ಹಾಜರಿದ್ದರು.
