ಮೈಸೂರು: ನಾಳಿನ ಬಂದ್ ಗೆ ಪರೋಕ್ಷ ಬೆಂಬಲ ವ್ಯಕ್ತಪಡಿಸುವ ಜತೆಗೆ ಕನ್ನಡಪರ ಸಂಘಟನೆಗಳು ಕೈಕಟ್ಟಿ, ಬಾಯಿ ಮುಚ್ಚಿ ಮೌನವಹಿಸಿ ಒಂದು ಗಂಟೆಗಳ ಕಾಲ ಆರ್.ಗೇಟ್ ವೃತ್ತದಲ್ಲಿ ನಿದ್ರಾವಸ್ಥೆಗೆ ಜಾರುವ ಮೂಲಕ ವಿನೂತನ ಪ್ರತಿಭಟನೆ ಹಮ್ಮಿಕೊಂಡಿವೆ.
ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ಮುಂಭಾಗದ ರಾಜಕುಮಾರ್ ಪಾರ್ಕ್ ನಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು, ಸಂಘ ಸಂಸ್ಥೆಗಳು ಹಾಗು ವಿದ್ಯಾರ್ಥಿ ಒಕ್ಕೂಟಗಳು ಸಭೆ ನಡೆಸಿ, ಆ 13 ರ ಕರ್ನಾಟಕ ಬಂದ್ ಕುರಿತು ಎಲ್ಲರ ಅಭಿಪ್ರಾಯ ಸಂಗ್ರಹಿಸಲಾಯಿತು.
ಸಭೆಯ ಅಧ್ಯಕ್ಷರೂ ಕರ್ನಾಟಕ ಕಾವಲುಪಡೆ ರಾಜ್ಯಾಧ್ಯಕ್ಷರಾದ ಎಂ.ಮೋಹನ್ ಕುಮಾರ್ ಗೌಡ ಅವರು ನಾಳಿನ ಬಂದ್ ಗೆ ಪರೋಕ್ಷ ಬೆಂಬಲ ವ್ಯಕ್ತಪಡಿಸುವ ಮೂಲಕ ರಾಜ್ಯ ಸರ್ಕಾರವು ಎಲ್ಲಾ ಕನ್ನಡ ಸಂಘ-ಸಂಸ್ಥೆಗಳನ್ನು ತಾಳ್ಮೆಯಿಂದ ಇರುವಂತೆ ಮನವಿ ಮಾಡಿ ಎಲ್ಲ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇವೆ ಎಂಬ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸೋಅಣ ಎಂದು ಹೇಳಿದರು.
ನಾಳಿನ ಬಂದ್ ನಲ್ಲಿ ಕನ್ನಡಪರ ಸಂಘಟನೆಗಳು ಕೈಕಟ್ಟಿ, ಬಾಯಿ ಮುಚ್ಚಿ ಮೌನವಹಿಸಿ ಒಂದು ಗಂಟೆಗಳ ಕಾಲ ಆರ್.ಗೇಟ್ ವೃತ್ತದಲ್ಲಿ ಸಾಂಕೇತಿಕವಾಗಿ ನಿದ್ರಾ ವ್ಯವಸ್ಥೆಗೆ ಜಾರುವ ಮೂಲಕ ವಿನೂತನ ಪ್ರತಿಭಟನೆ ಮಾಡಿ ರಾಜ್ಯ ಸರ್ಕಾರದ ಕಾರ್ಯ ಚಟುವಟಿಕೆಗಳನ್ನ ಗಮನಿಸಿ ಆಕ್ರೋಶವನ್ನು ಹೊರಹಾಕುವ ನಿರ್ಣಯವನ್ನು ಕೈಗೊಳ್ಳಲಾಯಿತು.
ಸಭೆಯಲ್ಲಿ ಎಂ.ಮೋಹನ್ ಕುಮಾರ್ ಗೌಡ, ಟಿ.ರವಿಗೌಡ, ಮಹದೇವಸ್ವಾಮಿ, ಮಂಡಕಳ್ಳಿ ಚಾಮರಾಜು, ಬೋಗಾದಿ ಸಿದ್ದೇಗೌಡ, ಟಿ ರವೀಂದ್ರ, ಗೋವಿಂದರಾಜು, ನಾಲಾಬೀದಿ ರವಿ, ವಕೀಲ ಡಿ.ಆರ್.ಕರಿಗೌಡ, ಅರುಣ್ ಕುಮಾರ್, ಬಿ.ಮಹದೇವ, ಮೂಗೂರು ನಂಜುಂಡಸ್ವಾಮಿ, ಎಸ್.ಸಿದ್ದಪ್ಪ, ಬಸವರಾಜು, ಜೆ.ಉಮೇಶ, ಕೆ.ಜಿ.ಕೊಪ್ಪಲ್ ಶಂಕರ್, ಮಿಲ್ಕ್ ಮಂಜು, ಸಂಜಯ್, ಮದನ್, ಮಹೇಶ್ ಕುಮಾರ್, ತೇಜಸ್ವಿ ನಾಗಲಿಂಗ ಸ್ವಾಮಿ, ವಿಷ್ಣು, ಡಿಪಿಕೆ ಪರಮೇಶ್, ಎಂ.ಹರೀಶ್, ರಾಜಶೇಖರ್.ಬಿ.ಬಿ, ಎಸ್ನಾಗೇಶ್ ಯಾದವ್,ಜೆ.ಮಂಜುನಾಥ್, ಮೈನಾ ಲೋಕೇಶ್, ಪಾಲಹಳ್ಳಿ ರಾಮಕೃಷ್ಣ, ಎಸ್ ಬಾಲಕೃಷ್ಣ, ಎಂ.ರಮೇಶ, ಕೆ.ಮುಕುಂದ್, ಜಿ.ಪ್ರಕಾಶ್, ಎಂ.ವಿ.ಶ್ರೀನಿವಾಸಮಿತ್ರ, ಮಂಜುನಾಥ, ದ್ಯಾವಪ್ಪ ನಾಯಕ, ಆರ್.ಶ್ರೀನಿವಾಸ್, ಪ್ಯಾಲೇಸ್ ಬಾಬು, ಎಸ್.ವಿ.ಶಿವನಾಯಕ ಮತ್ತಿತರ ಮುಖಂಡರು ಭಾಗವಹಿಸಿದ್ದರು.
