ಮೈಸೂರು: ಕಬ್ಬು ಬೆಳೆಗಾರರಿಗೆ ಸರಿಯಾಗಿ ಪ್ರೋತ್ಸಾಹ ಧನ ನೀಡಬೇಕು ಮತ್ತು ಬೆಳೆಗಾರರ ಸಮಸ್ಯೆಗಳಿಗೆ ತುರ್ತು ಸ್ಪಂದಿಸಬೇಕೆಂದು ಜಿಲ್ಲಾ ಕಬ್ಬು ಬೆಳೆಗಾರರ ಸಮಿತಿ ಆಗ್ರಹಿಸಿದೆ.
ಈ ವೇಳೆ ಜಿಲ್ಲಾ ಕಬ್ಬುಬೆಳೆಗಾರರ ಸಂಘದ ಅಧ್ಯಕ್ಷರಾದ ನಾಗಲಗೆರೆ ಶಿವಕುಮಾರ ಮಾತನಾಡಿ, ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಾದ 50 ರೂಪಾಯಿ ಸರ್ಕಾರ ನೀಡಿದ್ದು ಉಳಿದ 50 ರೂಪಾಯಿ ನೀಡಲು ಕಂಪನಿ ನ್ಯಾಯಾಲಯದ ಮೊರೆ ಹೋಗಿದ್ದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಅಳಗಾಂಚಿ ನಂಜನಗೂಡು ತಾಲೋಕು,ಮುಖ್ಯಧಿಕಾರಿಗಳಿಗೆ ಮನವಿ ಸಲ್ಲಿಸಿದ ನಂತರ ಅವರು ಮಾತನಾಡಿದರು.
ಸಕ್ಕರೆ ಕಂಪನಿ ಲಾಭದಲ್ಲಿದ್ದು, ರೈತರಿಗೆ ಉಳಿಕೆ 50 ರೂಪಾಯಿ ಕೊಡುವುದಕ್ಕೆ ಕಾರ್ಖಾನೆಗಳು ಸಬೂಬು ಹೇಳುತ್ತಿರುವುದು ಸರಿಯಲ್ಲ, ತಕ್ಷಣ ಸರ್ಕಾರ ನಿರ್ಧರಿಸಿರುವ 50 ರೂಪಾಯಿ ಪ್ರತಿಟನ್ ಕಬ್ಬಿಗೆ ನೀಡಬೇಕು ಎಂದು ಆಗ್ರಹಿಸಿದರು.
ರೈತರ ಜಮೀನಿನಿಂದ ಕಬ್ಬು ಕಟಾವು ಮಾಡಿ ಸಾಗಾಣೆ ದರವನ್ನು ಉತ್ತರ ಕರ್ನಾಟಕದ ಕಂಪನಿಗಳು ನೀಡುವಂತೆಯೇ ದಕ್ಷಿಣದ ನಮ್ಮ ಸಕ್ಕರೆ ಕಾರ್ಖಾನೆಗಳು ನೀಡಬೇಕು ಎಂದು ಹೇಳಿದರು.
ಕಬ್ಬು ತೂಕ ಮತ್ತು ರಿಕವರಿ ಅಂಶವನ್ನು ತೂಕದ ಯಂತ್ರ ಹಾಗೂ ಇಂಟೆಕ್ಸ್ ಮಿಷನ್ ಅಳವಡಿಸಿ ಪಾರದರ್ಶಕವಾಗಿ ರೈತರಿಗೆ ಸ್ಥಳದಲ್ಲೇ ತಿಳಿಸಬೇಕು,ಕಾರ್ಖಾನೆ ವ್ಯಾಪ್ತಿಯಲ್ಲಿ ಕಬ್ಬು ಸರಬರಾಜು ಮಾಡುವ ರೈತರಿಗೆ ಆರೋಗ್ಯಕರವಾದ ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆಯನ್ನು ಮಾಡಬೇಕೆಂದು ನಾಗಲಗೆರೆ ಶಿವಕುಮಾರ ಒತ್ತಾಯಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಗಂಡತೂರು ಅವರು ಮಾತನಾಡಿ, ಕಬ್ಬು ಕಟಾವಿಗೆ ಬಂದಿದ್ದು ಜುಲೈ ಕೊನೆಯ ವಾರದಲ್ಲೇ ಕಾರ್ಖಾನೆಯನ್ನು ಆರಂಭಿಸಿ ಕೇಂದ್ರ ಸರ್ಕಾರ ನಿಗದಿಪಡಿಸಿದ ಎಫ್ ಆರ್ ಪಿ ದರವನ್ನು ಪೂರ್ಣವಾಗಿ ರೈತರಿಗೆ ಕೊಡಬೇಕು ಎಂದು ತಿಳಿಸಿದರು.
ಮಧ್ಯಪ್ರದೇಶ,ರಾಜಸ್ಥಾನ, ಮಹಾರಾಷ್ಟ್ರ,ಆಂದ್ರಪ್ರದೇಶ ಸೇರಿದಂತೆ ದೇಶದ ಪ್ರಮುಖ ಸಕ್ಕರೆ ಕಾರ್ಖಾನೆಗಳು ಕೇಂದ್ರ ಸರ್ಕಾರದ ಎಫ್. ಆರ್. ಪಿ. ಧರ ನೀಡುತ್ತಿದ್ದು ನಮ್ಮ ರಾಜ್ಯದ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದಲ್ಲಿ ರೈತರ ಕಬ್ಬಿನ ದರವಲ್ಲಿ ವ್ಯತ್ಯಾಸವಿದೆ ಎಂದು ಹೇಳಿದರು.
ತಾವು ಸರ್ಕಾರ ಮತ್ತು ರೈತರ ಜೊತೆ ಮಾತನಾಡಿ ಈ ಭಾಗದ ರೈತರಿಗೆ ಸಿಗಬೇಕಾದ ನ್ಯಾಯಯುತ ಹಣವನ್ನು
ಕಂಪನಿಗಳು ನೀಡಬೇಕು ತಾವು ಕಬ್ಬು ಬೆಳೆಯಲು ನಿಗದಿಪಡಿಸಿರುವ ಸಮಯಕ್ಕಿಂತ ಕಟಾವಿಗೆ ಹೆಚ್ಚಿನ ಸಮಯ ತೆಗೆದುಕೊಳ್ಳಬಾರದು,ಹಾಗೊಂದು ವೇಳೆ ತೆಗೆದುಕೊಂಡರೆ ಹೆಚ್ಚಿನ ದರವನ್ನು ರೈತರಿಗೆ ನೀಡಬೇಕು, ಕಾರ್ಖಾನೆಯಲ್ಲಿ ಉಪ ಉತ್ಪನದಲ್ಲಿಯೂ ಕಂಪನಿಗೆ ಲಾಭವಿದ್ದು ರೈತರಿಗೆ ನೀಡಬೇಕಾದ ಸಮಪಾಲು ನೀಡುವಂತೆ ಕಂಪನಿಯ ಮುಖ್ಯಧಿಕಾರಿಗಳಿಗೆ ಮನವಿ ಮಾಡಿದರು.
ಈ ವೇಳೆ ಕಂಪನಿಯ ಮುಖ್ಯಾಧಿಕಾರಿಗಳಿಗೆ ಭಾರತೀಯ ಕಿಸಾನ್ ಸಂಘದ ಮೂಲಕ ಮನವಿ ಸಲ್ಲಿಸಲಾಯಿತು.
ಉಪಾಧ್ಯಕ್ಷರಾದ ಬೆನಕನಹಳ್ಳಿ ಪರಮೇಶ್ ಸರಿಯಾದ ಸಮಯಕ್ಕೆ ಹಣ ಹಾಗೂ ಕಟಾವ್ ಮಾಡದಿದ್ದರೆ ನಿಮ್ಮ ಕಾರ್ಖಾನೆಗೆ ಮುತ್ತಿಗೆಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ನಿಯೋಗದಲ್ಲಿ
ಜಿಲ್ಲಾ ಕಬ್ಬು ಬೆಳೆಗಾರರ ಸಮಿತಿಯ
ಜಗದೀಶ್,ಮಂಜೇಶ್,ಅಶೋಕ,ಡನಾಯಕನಪುರ ಸಿದ್ದರಾಜು, ಹಿರಿಯೂರು ಲಿಂಗರಾಜು, ಸಿದ್ದರಾಜು, ಚಿಕ್ಕಲ್ಕುಣಿ ಬೋರೆಗೌಡ,ಪುಟ್ಟಮಾದೇಗೌಡ, ಮಾದೇಗೌಡ, ಹಲವಾರ ಯಶವಂತ್, ಚಿಮಿಲಿ ನಾರಾಯಣ, ಜಯಶೀಲ ನಾಗರಾಜ ಮರಡಿಪುರ ಮಲ್ಲಿಕಾರ್ಜುನ್, ಧರ್ಮಯ್ಯನಹುಂಡಿ ಬಸವರಾಜು ಯೋಗೇಶ್,ರೇಣುಕಾಪ್ರಸಾದ್, ಮಹಿಳಾ ಪ್ರಮುಖರಾದ ಮಹಾದೇವಮ್ಮ, ರೂಪ, ಸೇರಿದಂತೆ ವಿವಿಧ ಗ್ರಾಮದ ಕಬ್ಬು ಬೆಳೆ ಗಾರರು ರೈತ ಮುಖಂಡರು ಹಾಜರಿದ್ದರು.
