ಮೈಸೂರು: ರಾಜಮನೆತನ ಕುರಿತು ಸಚಿವ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಖಂಡಿಸಿ ಮೈಸೂರಿನಲ್ಲಿ ಹೋರಾಟ ತೀವ್ರವಾಗುತ್ತಿದ್ದು, ಪೋಸ್ಟ್ ಕಾರ್ಡ್ ಚಳವಳಿ ಪ್ರಾರಂಭವಾಗಿದೆ.
ಒಂಟಿಕೊಪ್ಪಲಿನ ಪೋಸ್ಟ್ ಆಫೀಸ್ ಎದುರು ಹಾಗೂ ಮೈಸೂರಿನ ವಿವಿ ಮೊಹಲ್ಲಾ ಅಂಚೆ ಕಚೇರಿ ಬಳಿ ಈ ಕಾರ್ಡ್ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ರಾಜಮನೆತನ ಕುರಿತು ಸಚಿವ ಯತೀಂದ್ರ ಹೇಳಿಕೆಯನ್ನು ಖಂಡಿಸಿ ಸೇವ್ ಹಿಂದೂ ಟೆಂಪಲ್ಸ್ ಟೀಮ್ ವತಿಯಿಂದ ಈ ಪ್ರತಿಭಟನೆಯನ್ನು ಆಯೋಜಿಸಲಾಗಿದೆ.
ಮೈಸೂರು ರಾಜಮನೆತನದ ಕೊಡುಗೆಗಳ ಬಗ್ಗೆ ಪೋಸ್ಟ್ ಕಾರ್ಡ್ ಮೂಲಕ ಸಚಿವ ಯತೀಂದ್ರ ಅವರಿಗೆ ತಿಳಿಸಲು ಪ್ರತಿಭಟನಾಕಾರರು ತೀರ್ಮಾನಿಸಿದ್ದಾರೆ.
