(ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ)
ಚಾಮರಾಜನಗರ: ನಗರ ಮತ್ತು ಗ್ರಾಮಾಂತರ ತಾಲ್ಲೂಕು ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ
ವಿಜಯದಶಮಿ ಉತ್ಸವದ ಅಂಗವಾಗಿ ವಿಜಯದಶಮಿ ಪಥಸಂಚಲನ ಅದ್ದೂರಿಯಾಗಿ ನಡೆಯಿತು.
ಪಟ್ಟಣದ ಚಾಮರಾಜೇಶ್ವರ ದೇವಸ್ಥಾನದಿಂದ ಆರಂಭಗೊಂಡ ಆರ್.ಎಸ್.ಎಸ್. ಪಥಸಂಚಲನವು ಅಗ್ರಹಾರ ಸರ್ಕಾರಿ ಬಸ್ ನಿಲ್ದಾಣ, ದೇವಾಂಗ ಬೀದಿ, ದೊಡ್ಡ ಅಂಗಡ ಬೀದಿ, ಚಿಕ್ಕ ಅಂಗಡಿಬೀದಿ, ಸಂತೆಮರಳ್ಳಿ ವೃತ್ತ, ಭುವನೇಶ್ವರಿ ವೃತ್ತ ಮೂಲಕ ಮರಳಿ ಚಾಮರಾಜೇಶ್ವರ ದೇವಸ್ಥಾನಕ್ಕೆ ವಾಪಸ್ ತಲುಪಿತು
ಪಥಸಂಚಲನ ಪ್ರಯುಕ್ತ ಪಟ್ಟಣದ ಬೀದಿಗಳಲ್ಲಿ ಸಾರ್ವಜನಿಕರು ಪುಷ್ಪವೃಷ್ಟಿ ಮೂಲಕ ಬರಮಾಡಿಕೊಂಡರು.
