ಅಮೆರಿಕಾ: ಅಮೆರಿಕದ ಫ್ಲೋರಿಡಾ ರಾಜ್ಯದ ಪಾಮ್ ಬೀಚ್ ಕೌಂಟಿಯ ಜನವಸತಿ ಪ್ರದೇಶದಲ್ಲಿ ಖಾಸಗಿ ಜೆಟ್ ವಿಮಾನವೊಂದು ಪತನಗೊಂಡಿದ್ದು, 9 ಮಂದಿ ದುರ್ಮರಣ ಕ್ಕೀಡಾಗಿದ್ದಾರೆ.
ಈ ಭೀಕರ ದುರಂತ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿವಾಸದ ಸಮೀಪದಲ್ಲೇ ಸಂಭವಿಸಿದೆ.
ಈ ಅಪಘಾತವು ಪಾಮ್ ಬೀಚ್ ಕೌಂಟಿಯ ಶ್ರೀಮಂತ ಪ್ರದೇಶದಲ್ಲಿರುವ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರೆಸಾರ್ಟ್ ‘ಮಾರ್-ಎ-ಲಾಗೋ’ನಿಂದ ಸುಮಾರು ಒಂಬತ್ತು ಮೈಲಿ ದೂರದಲ್ಲಿರುವ ಕ್ರೆಸ್ಟ್ಹೇವನ್ ಬಳಿಸಂಭವಿಸಿದೆ.
ಬಹು-ಪಥದ ರಸ್ತೆಯ ಮಧ್ಯಭಾಗದಲ್ಲಿ ದೊಡ್ಡದಾದ ಗುಂಡಿ ಬಿದ್ದಿರುವುದು ಮತ್ತು ‘ಲಿಯರ್ಜೆಟ್ 60 ವಿಮಾನದ ಅವಶೇಷಗಳು ಹಾಗೂ ಬೆಂಕಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬಂದಿದೆ. ಆದರೆ, ನೆಲದ ಮೇಲಿದ್ದ ಯಾರಿಗೂ ಯಾವುದೇ ಹಾನಿಯಾಗಿಲ್ಲ.
ಈ ವಿಮಾನವು ಟೆಕ್ಸಾಸ್ನ ಆಸ್ಟಿನ್ನಿಂದ ಬಹಾಮಾಸ್ಗೆ ಹೊರಟಿತ್ತು ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ತಿಳಿಸಿದೆ.
