ಮೈಸೂರು: ಮೈಸೂರು ಜಿಲ್ಲೆಯ ಕಬ್ಬು ಬೆಳೆಗಾರರಿಗೆ ನೀಡಬೇಕಾದ ಪ್ರೊತ್ಸಾಹ ದನ ಮತ್ತು ಸಾಗಾಣಿಕೆ ವೆಚ್ಚ ಹಾಗೂ ಕಬ್ಬು ಕತ್ತರಿಸುವ ವೆಚ್ಚ ಕಂಪನಿಗಳೇ ನೀಡುವಂತೆ ಅದೇಶಿಸಬೇಕೆಂದು ಭಾರತೀಯ ಕಿಸಾನ್ ಸಂಘ ಆಗ್ರಹಿಸಿದೆ.
ಭಾರತೀಯ ಕಿಸಾನ್ ಸಂಘದ ನಿಯೋಗ ಇಂದು ಮೈಸೂರು ಜಿಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿತು.
ಜುಲೈ ತಿಂಗಳಲ್ಲಿ ಕಾರ್ಖಾನೆಗಳ ಮಾಲೀಕರು ರೈತರ ಸಭೆ ನಡೆಸಬೇಕೆಂದು ಒತ್ತಾಯಿಸಿದರು.
ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಾದ 50 ರೂಪಾಯಿ ಸರ್ಕಾರ ನೀಡಿದ್ದು ಉಳಿದ 50 ರೂಪಾಯಿ ಕಂಪನಿಗಳು ತಕ್ಷಣದಲ್ಲಿ ಪಾವತಿಸುವಂತೆ ಆದೇಶಿಸಬೇಕು. ಎಲ್ಲಾ ಕಾರ್ಖಾನೆಗಳು ಜಮೀನಿನಿಂದ ಕಟಾವು ದರವನ್ನು ನೀಡುತ್ತವೆ ಅದೇ ರೀತಿ ನಮ್ಮ ಜಿಲ್ಲೆಯ ಕಾರ್ಖಾನೆಗಳು ನೀಡುವಂತೆ ಆದೇಶಿಸಬೇಕು ಎಂದು ಕೋರಿದರು.
ಕಾರ್ಖಾನೆಯ ವ್ಯಾಪ್ತಿಯಲ್ಲಿ ಕಬ್ಬು ಸರಬರಾಜು ಮಾಡುವ ರೈತರಿಗೆ ಆರೋಗ್ಯಕರವಾದ ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆಯನ್ನು ಮಾಡುವುದು ಹಾಗೂ ನೆರಳು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು.
ಒಂದೇ ರಾಜ್ಯದಲ್ಲಿ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದಲ್ಲಿ ರೈತರ ಕಬ್ಬಿನ ದರದಲ್ಲಿ ವ್ಯತ್ಯಾಸವಿದ್ದು ಜಿಲ್ಲಾಧಿಕಾರಿಗಳು ಸರ್ಕಾರದ ಜೊತೆ ಮಾತನಾಡಿ ಈ ಭಾಗದ ರೈತರಿಗೆ ಸಿಗಬೇಕಾದ ನ್ಯಾಯಯುತ ಹಣವನ್ನು ಕುಡಿಸಬೇಕು ಎಂದು ನಿಯೋಗ ಮನವಿ ಮಾಡಿತು.
ಈ ನಿಯೋಗದಲ್ಲಿ ಮಹಿಳಾ ಪ್ರಮುಖರಾದ ಪುಟ್ಟಮ್ಮ ಶ್ರೀಕಾಂಟೇಗೌಡ,ಕಬ್ಬು ಬೆಳೆಗಾರರ ಸಮಿತಿ ಪ್ರಮುಖರಾದ ಶಿವಕುಮಾರ್ ನಾಗಲಗೆರೆ,ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಗಂಡತೂರು, ನಗರಧ್ಯಕ್ಷ ನಾಗರಾಜು, ಕಾರ್ಯದರ್ಶಿ ಶ್ರೀಪಾದ್, ಉಪಾಧ್ಯಕ್ಷರಾದ ಆನಂದ್ ಸಿಂಗ್, ದಯಾನಂದ, ಪ್ರವೀಣ್ ಸೇರಿದಂತೆ ರೈತ ಪ್ರಮುಖರು ಹಾಜರಿದ್ದರು.
