ಮೈಸೂರು: ಜನವರಿ 30 ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಚುನಾವಣೆ ನಡೆಯಲಿದ್ದು,ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಅಧ್ಯಕ್ಷರು ಹಾಗೂ ನಟಿ ಜಯಮಾಲಾ ಅವರು ಸ್ಪರ್ಧಿಸುತ್ತಿದ್ದಾರೆ.
ಜಯಮಾಲ ಅವರು ಮೈಸೂರಿಗೆ ಆಗಮಿಸಿ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ನಂತರ ನಗರದ ಸಂದೇಶ ದಿ ಪ್ರಿನ್ಸ್ ಹೋಟೆಲ್ ನಲ್ಲಿ ಪ್ರಚಾರವನ್ನು ಪ್ರಾರಂಭಿಸಿದರು.
ಈ ಸಂದರ್ಭದಲ್ಲಿ ಹಾಲಿ ಅಧ್ಯಕ್ಷ ನರಸಿಂಹಲು,ಮಾಜಿ ಅಧ್ಯಕ್ಷರಾದ ಸಾ ರಾ ಗೋವಿಂದ್, ಚಿನ್ನೇಗೌಡ, ಎಂ ಎನ್ ಸುರೇಶ್, ಎಂ ಎನ್ ಕುಮಾರ್, ಸಂದೇಶ್ ನಾಗರಾಜ್,ಕಾರ್ಯದರ್ಶಿ ಗಣೇಶ್, ರಾಮಕೃಷ್ಣ,ಅಶೋಕ್ ಕುಮಾರ್ ಮತ್ತಿತರರು
ಜಯಮಾಲಾ ಪರ ಪ್ರಚಾರ ಕಾರ್ಯದಲ್ಲಿ
ಭಾಗಿಯಾಗಿದ್ದರು.
ನಂತರ ಗೋಲ್ಡನ್ ಸುರೇಶ್ ಫಿಲಂಸ್ ವತಿಯಿಂದ ಜಯಮಾಲ ಅವರಿಗೆ ಮೈಸೂರು ಪೇಟ ತೊಡಿಸಿ ಸನ್ಮಾನಿಸಿ ತಂಡಕ್ಕೆ ಬೆಂಬಲ ಸೂಚಿಸಿದರು.
ನಂತರ ಸಾ ರಾ ಗೋವಿಂದು ಮಾತನಾಡಿದರು.
ನಿರ್ಮಾಪಕರಾದ ಎಂ ಡಿ ಪಾರ್ಥಸಾರಥಿ,
ಸುರೇಶ್ ಗೋಲ್ಡ್, ನಂದೀಶ್ ನಾಯಕ್, ವಿಕ್ರಂ ಅಯ್ಯಂಗಾರ್, ಪ್ರಮೀಳಾ, ಶೋಭಾ, ತರರು ಜಯಮಾಲಾ ಅವರಿಗೆ ಶುಭ ಕೋರಿದರು.
