ಬೆಂಗಳೂರು: ಗುಬ್ಬಿವಾಣಿ ಟ್ತಸ್ಟ್ ಆಯೋಜಿತ ಅವಳ ಹೆಜ್ಜೆ ಕಿರುಚಿತ್ರೋತ್ಸವ 2026 (ಎರಡನೆ ಆವೃತ್ತಿ),ಕಿರುಚಿತ್ರ ಪ್ರದರ್ಶನ ಇದೇ ಭಾನುವಾರ 24 ರಂದು ಬೆಳಿಗ್ಗೆ 9 ರಿಂದ ಸಂಜೆ 7 ಗಂಟೆವರೆಗೆ ಬೆಂಗಳೂರಿನ ಚಾಮರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯಲಿದೆ.
ಮಹಿಳಾ ನಿರ್ದೇಶಿತ ಆಯ್ದ10 ಕಿರುಚಿತ್ರಗಳ ಪ್ರದರ್ಶನ ಮತ್ತು ವಿಜೇತ ನಿರ್ದೇಶಕಿಗೆ 1 ಲಕ್ಷ ನಗದು ಬಹುಮಾನ ನೀಡಲಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಸ್ಥಾಪಕ ಟ್ರಸ್ಟಿ ಮಾಳವಿಕಾ ಗುಬ್ಬಿವಾಣಿ ತಿಳಿಸಿದರು.
ಅವಳ ಹೆಜ್ಜೆ ಕಿರುಚಿತ್ರೋತ್ಸವ ಕೇವಲ ಪ್ರದರ್ಶನವಲ್ಲ, ಇದೊಂದು ಸಾಂಸ್ಕೃತಿಕ ಚಳವಳಿ. ಕನ್ನಡದ ಮಹಿಳಾ ನಿರ್ದೇಶಕಿಯರಿಗಾಗಿಯೇ ಮೀಸಲಾಗಿರುವ ಈ ವಿಶಿಷ್ಟ ಚಿತ್ರೋತ್ಸವದಲ್ಲಿ, ಈ ಬಾರಿ ಕರ್ನಾಟಕದ ಮೂಲೆ ಮೂಲೆಯ ಪ್ರತಿಭೆಗಳಷ್ಟೇ ಅಲ್ಲದೆ, ದೂರದ ಅಮೆರಿಕದ ಅನಿವಾಸಿ ಕನ್ನಡತಿಯೊಬ್ಬರು ನಿರ್ದೇಶಿಸಿದ ಕಿರುಚಿತ್ರವೂ ಪ್ರದರ್ಶನಕ್ಕೆ ಆಯ್ಕೆಯಾಗಿರುವುದು ವಿಶೇಷ ಎಂದು ತಿಳಿಸಿದರು.
ಆಯ್ಕೆ ಅತ್ಯಂತ ಸ್ಪರ್ಧಾತ್ಮಕವಾಗಿದ್ದು, ಸಂಗೀತಾ ನಂಜುಂಡಸ್ವಾಮಿ, ದೀಪ್ತಿ ಮೂರ್ತಿ ಅಯ್ಯರ್, ಸುಮನಾ ಚಂದ್ರಗಿರಿ ಅವರನ್ನು ಒಳಗೊಂಡ ಪ್ರತಿಷ್ಠಿತ ತೀರ್ಪುಗಾರರ ತಂಡ ಸೂಕ್ಷ್ಮವಾಗಿ ಪರಿಗಣಿಸಿದ ಆಯ್ದ 10 ಚಿತ್ರಗಳನ್ನು ಈ ಕಿರುಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗುವುದು ಎಂದು ಹೇಳಿದರು.
ಆಯ್ಕೆಯಾದ 10 ಕಿರುಚಿತ್ರಗಳು: ಕಾಶಿ ಕೈಲಾಸ’, ಸೋರುತಿಹುದು ಮನೆಯ ಮಾಳಿಗಿ’, ರೊಟ್ಟಿ’, ಎ ಲಿಟ್ಲ್ ಕೇರ್’, ಹುಲಿಯಪ್ಪ’, ದಾರಿ’, ಮೌನ ರಾಗ’, ಆ ಮಾಡಿ’, ಗೆಜ್ಜೆ’, ನಿತ್ಯ’
ಚಿತ್ರೋತ್ಸವದಲ್ಲಿ ಸಿನೆಮಾದಲ್ಲಿ ಅವಳ ಹೆಜ್ಜೆ ‘ಅ – ಅಃ’ ವರೆಗೆ”* ವಿಷಯಾಧಾರಿತ ಚರ್ಚಾಗೋಷ್ಠಿ ಯನ್ನು ಆಯೋಜಿಸಲಾಗಿದೆ.
ನೀತು ಶೆಟ್ಟಿ, ಗ್ರೀಷ್ಮಾ ಶ್ರೀಧರ್, ಸಂಗೀತಾ ನಂಜುಂಡಸ್ವಾಮಿ, ಸಂಜೋತಾ ಭಂಡಾರಿ ಅವರು ಭಾಗವಹಿಸಲಿದ್ದಾರೆ.
ಚರ್ಚಾಗೋಷ್ಠಿಯ ನಂತರ ವಿಜೇತರ ಘೋಷಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಅತ್ಯುತ್ತಮ ಕಿರುಚಿತ್ರಕ್ಕೆ ಅವಳ ಹೆಜ್ಜೆ ಪ್ರಶಸ್ತಿ ನಗದು 1,00,000 ಮತ್ತು ಕೆಲವು ಚಿತ್ರಗಳಿಗೆ ಮೆಚ್ಚುಗೆಯ ಬಹುಮಾನ 10,000 ರೂ ಇರುತ್ತದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಚಿತ್ರೋತ್ಸವ ನಿರ್ದೇಶಕಿ ಶಾಂತಲಾ ದಾಮ್ಲೆ ಮತ್ತು ಚಿತ್ರ ಸಮಿತಿ ಮುಖ್ಯಸ್ಥೆ ಉಷಾ ಸಂಪತ್ಕುಮಾರ್ ಉಪಸ್ಥಿತರಿದ್ದರು.
ಪ್ರವೇಶ ಉಚಿತ,ಇದರಲ್ಲಿ ಭಾಗವಹಿಸಲು ಈ ಲಿಂಕ್ ಮೂಲಕ ನೋಂದಾಯಿಸಬಹುದು: https://forms.gle/3es12sFpvpKcrXgd7
5 ಕಿರುಚಿತ್ರಗಳು ಬೆಳಿಗ್ಗೆ
(1) ಅನು ಕುಲಕರ್ಣಿ ನಿರ್ದೇಶನದ ‘ಕಾಶಿ ಕೈಲಾಸ’ (2025)
(2) ಅಶ್ವಿನಿ ಅನೀಶ್ ನಿರ್ದೇಶನದ ‘ಸೋರುತಿಹುದು ಮನೆಯ ಮಾಳಿಗಿ’ (2025)
(3) ಸುಪ್ರಿಯಾ ಶಂಕರ ನಿಪ್ಪಾಣಿ ನಿರ್ದೇಶನದ ‘ರೊಟ್ಟಿ’ (2026)
(4) ಸೀಮಾ ಶಶಿಧರ್ ನಿರ್ದೇಶನದ ‘ಎ ಲಿಟ್ಲ್ ಕೇರ್’ (2025)
(5) ಸೌರಭಾ ರಾವ್ ನಿರ್ದೇಶನದ ‘ಹುಲಿಯಪ್ಪ’ (2025)
2:00 ರಿಂದ 3:15 ಪ್ರದರ್ಶನ : 5 ಕಿರುಚಿತ್ರಗಳು
(6) ಸುಷ್ಮಾ ಭಾರದ್ವಾಜ್ ನಿರ್ದೇಶನದ ‘ದಾರಿ’ (2025)
(7) ಸುನಯನಾ ಸುರೇಶ್ ನಿರ್ದೇಶನದ ‘ಮೌನ ರಾಗ’ (2025)
(8) ಶ್ರೇಯ ಸುನಿಲ್ ನಿರ್ದೇಶನದ ‘ಆ ಮಾಡಿ’ (2024)
(9) ಹರ್ಷಿತ ಜಿ. ಮತ್ತು ರಚನ ಸುವರ್ಣ ನಿರ್ದೇಶನದ ‘ಗೆಜ್ಜೆ’ (2026)
(10) ವನು ಪಾಟೀಲ್ ನಿರ್ದೇಶನದ ‘ನಿತ್ಯ’ (2026)
