ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟಿ ಶುಭಾ ಪೂಂಜಾ ದಂಪತಿ ವಿವಾಹವಾದ ನಾಲ್ಕೇ ವರ್ಷದಲ್ಲಿ ದಾಂಪತ್ಯ ಜೀವನಕ್ಕೆ ಮುಕ್ತಾಯ ಹಾಡಿ ವಿಚ್ಛೇದನಕ್ಕೆ ಮುಂದಾಗಿದ್ದಾರೆ.
ನಟಿ ಶುಭಾ ಪೂಂಜಾ ಹಾಗೂ ಅವರ ಪತಿ ಸುಮಂತ್ ಬಿಲ್ಲವ ಪರಸ್ಪರ ಒಪ್ಪಿಕೊಂಡೇ ವಿಚ್ಛೇದನವಾಗಲು ನಿರ್ಧರಿಸಿ, ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ಕನ್ನಡಪರ ಹೋರಾಟಗಾರ ಹಾಗೂ ಉದ್ಯಮಿಯಾಗಿರುವ ಉಡುಪಿ ಮೂಲದ ಸುಮಂತ್ ಬಿಲ್ಲವ ಮತ್ತು ನಟಿ ಶುಭಾ ಪೂಂಜಾ ಅವರು ಪ್ರೀತಿಸಿ, ನಂತರ 2022ರ ಜನವರಿ 5 ರಂದು ಶುಭಾ ಪೂಂಜಾ ಅವರು ತಮ್ಮ ಸ್ವಂತ ಊರಿನಲ್ಲಿ ಅತೀ ಸರಳವಾಗಿ,ಯಾವುದೇ ಆಡಂಬರವಿಲ್ಲದೆ ವಿವಾಹವಾಗಿದ್ದರು.
ಈಗ ಇವರಿಬ್ಬರು ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
