ಹುಣಸೂರು: ಶುಚಿತ್ವ ಕಾಪಾಡಬೇಕಾದ
ಹುಣಸೂರಿನ ನಗರ ಸಭೆಯಲ್ಲೇ ಕೊಳಕು ತಾಂಡವವಾಡುತ್ತಿದೆ ಎಂದು ಮಾಜಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಾದ ಹುಣಸೂರು ಕಲ್ಕುಣಿಕೆಯ ಕೃಷ್ಣ ನಾಯಕ ಹಾಗೂ ಆಶಾಕೃಷ್ಣ ನಾಯಕ ಗಂಭೀರ ಆರೋಪ ಮಾಡಿದ್ದಾರೆ
ನಗರಸಭೆ ಕಚೇರಿಯಲ್ಲಿ ಸಾರ್ವಜನಿಕರಿಗಾಗಿ ನಿರ್ಮಿಸಲಾಗಿದ್ದ ಶೌಚಾಲಯನ್ನು ದುರಸ್ತಿ ನೆಪವೊಡ್ಡಿ ಮುಚ್ಚಲಾಗಿದೆ.
ನಗರಸಭೆ ಪರಿಸರ ಇಂಜಿನಿಯರ್ ಹಾಗೂ ಪೌರಾಯುಕ್ತರು, ಅರೋಗ್ಯಾಧಿಕಾರಿ ಅವರುಗಳು ಇದು ಗೊತ್ತಿದ್ದರೂ ಶೌಚಾಲಯವನ್ನು ದುರಸ್ತಿ ಪಡಿಸಿ ಜನರಿಗೆ ಬಿಟ್ಟುಕೊಡಲು ವಿಫಲರಾಗಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಹುಣಸೂರಿನ ನಗರಸಭೆಗೆ ಖಾತೆ ಮಾಡಿಸಲು, ಕಂದಾಯವನ್ನು ಕಟ್ಟಲು ಹಾಗೂ ಇತರೆ ಕೆಲಸಗಳಿಗೆ ಪ್ರತಿದಿನ ನೂರಾರು ಮಂದಿ ಬರುತ್ತಾರೆ.ಅದರಲ್ಲೂ ಮಾಹಿಳೆಯರೇ ಹೆಚ್ಚು ಮಂದಿ ಇರುತ್ತಾರೆ.
ಮಕ್ಕಳು,ವಯಸ್ಕರು
ಮೇದುಮೇಹಿಗಳು,ವೃದ್ಧರು ಶೌಚಾಲಯವಿಲ್ಲದೆ ಬಹಳ ತೊಂದರೆ ಅನುಭವಿಸುತ್ತಿದ್ದಾರೆ.ಇಲ್ಲಿನ ಅಧಿಕಾರಿಗಳಿಗೆ
ಕಣ್ಣು ಕಾಣುತ್ತಿಲ್ಲ ಎಂದು ಕರ್ನಾಟಕ ಪ್ರಜಾಪಾರ್ಟಿ ರೈತಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಕೂಡಾ ಕಿಡಿಕಾರಿದ್ದಾರೆ.
ಈ ಹಿಂದೆ ಕೋಟಿ ಕೋಟಿ ಖರ್ಚು ಮಾಡಿ ನಿರ್ಮಾಣಗೊಂಡ ನಗರಸಭೆಯಲ್ಲಿ ಈಶಾನ್ಯ ಭಾಗ ಸಂಪೂರ್ಣವಾಗಿ ಕಳಪೆ ಯಿಂದ ಕೂಡಿದೆ,ನಗರಸಭೆಯ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಶೌಚಾಲಯ ತುಂಬಾ ಕಳಪೆ ಗುಣಮಟ್ಟದ್ದು ಇಲ್ಲಿ ಶೇಖರಣೆಗೊಂಡ ನೀರು ಅಲ್ಲೇ ಉಳಿದು ಅಸಹ್ಯವಾಗುತ್ತಿದೆ ಎಂದು ಕೃಷ್ಣ ನಾಯಕ ಹಾಗೂ ಆಶಾಕೃಷ್ಣ ನಾಯಕ ಹೇಳಿದ್ದಾರೆ.
ನಗರ ಸಭೆಗೆ ಎರಡು ಬಾರಿ ಸ್ವಚ್ಛ ನಗರಸಭೆ ಪ್ರಶಸ್ತಿ ಬಂದಿದೆ.ಆದರೆ ಪ್ರಸ್ತುತ ಸ್ಥಿತಿ ನೋಡಿದರೆ ಅವಮಾನವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಹಲವಾರು ವರ್ಷಗಳಿಂದ ಒಂದೇ ಜಗದಲ್ಲಿ ಗೂಟ ಹೊಡೆದು ಕೂತ ಕೆಲವು ಅಧಿಕಾರಿಗಳು ಹಾಗೂ ಇಂಜಿನಿಯರ್ ಇದಕ್ಕೆ ಲ್ಲಾ ಕಾರಣ ಎಂದು ಕೃಷ್ಣ ನಾಯಕ ಹಾಗೂ ಆಶಾಕೃಷ್ಣ ನಾಯಕ ದೂರಿದ್ದಾರೆ.
ನಗರಸಭೆ ಸಮೀದಲ್ಲೇ ಮೈದಾನ ಇದೆ.ಬೆಳಿಗ್ಗೆ,ಸಂಜೆ ಹಿರಿಯ ನಾಗರೀಕರು, ಮಹಿಳೆಯರು ಇಲ್ಲಿ ವಾಕ್ ಮಾಡುತ್ತಾರೆ.ವಿದ್ಯಾರ್ಥಿಗಳು ಯಾವುದಾದರೂ ಕ್ರೀಡೆ ಪ್ರ್ಯಾಕ್ಟೀಸ್ ಮಾಡುತ್ತಿರುತ್ತಾರೆ.ಆದರೆ ಇಲ್ಲೂ ಕೂಡಾ ಶೌಚಲಯವಿಲ್ಲ.ಇವರೆಲ್ಲರಿಗೂ ನಗರಸಭೆಯಲ್ಲಿರುವ ಸಾರ್ವಜನಿಕ ಶೌಚಾಲಯ ಅನುಕೂಲವಾಗಿತ್ತು.ಜತೆಗೆ ಈ ಮೈದಾನ ಸುತ್ತ ಅಂಗಡಿಗಳಿವೆ ಅವರಿಂದ ಬಾಡಿಗೆ ವಸೂಲು ಮಾಡುವ ನಗರಸಭೆ ಅಧಿಕಾರಿಗಳು ಮೂಲಸೌಕರ್ಯವನ್ನೇ ಕೊಟ್ಟಿಲ್ಲ ಎಂದು ಕರ್ನಾಟಕ ಪ್ರಜಾಪಾರ್ಟಿ ರೈತಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಡಲೇ ನಗರಸಭೆಯ ಸಾರ್ವಜನಿಕ ಶೌಚಾಲಯ ಜನರ ಬಳಕೆಗೆ ಅನುಕೂಲ ಮಾಡಿಕೊಡಬೇಕೆಂದು ಅವರು ಒತ್ತಾಯಿಸಿದ್ದಾರೆ.
