ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ ಅಭಿನಯದ ಬಹು ನಿರೀಕ್ಷಿತ ಕೊನೆಯ ಚಿತ್ರ ʼಜನ ನಾಯಗನ್ʼ ಗೆ ಸಂಕಷ್ಟ ಎದುರಾಗಿದೆ.
ʼಜನ ನಾಯಗನ್ʼಜನವರಿ 9ರಂದು ಬೆಳ್ಳಿ ತೆರೆಮೇಲೆ ಬರಲು ಸಿದ್ದವೇನೋ ಆಗಿದೆ, ಚಿತ್ರ ಬಿಡುಗಡೆಗೆ ಇನ್ನೂ ಕೇವಲ ಎರಡೆ ದಿನ ಬಾಕಿ ಇದೆ,ಆದರೆ ಚಿತ್ರಕ್ಕೆ ಈಗ ಸಂಕಷ್ಟ ಎದುರಾಗಿದೆ.
ಅದೇನೆಂದರೆ ಚಿತ್ರಕ್ಕೆ ಸೆನ್ಸಾರ್ ಪ್ರಮಾಣ ಪತ್ರ ಸಿಗದಿರುವುದು.ಇದೀಗ ಚಿತ್ರತಂಡಕ್ಕೆ ದೊಡ್ಡ ಆತಂಕ ಮೂಡಿಸಿದೆ.ಹಾಗಾಗಿ ಚಿತ್ರತಂಡ ಸದ್ಯ ಕೋರ್ಟ್ ಮೆಟ್ಟಿಲೇರುವ ಪರಿಸ್ಥಿತಿ ಎದುರಾಗಿದೆ.
ವಿಜಯ್ ಅಭಿನಯದ ಜನ ನಾಯಗನ್ ಚಿತ್ರವನ್ನು ಸೆನ್ಸಾರ್ ಮಂಡಳಿಯು ಡಿಸೆಂಬರ್ 19ರಂದೇ ವಿಕ್ಷೀಸಿದೆ ಆದರೆ ಇನ್ನೂ ಪ್ರಮಾಣಪತ್ರ ನೀಡಿಲ್ಲ. ಕೆಲ ತಿದ್ದುಪಡಿಗಳ ಬಳಿಕ ಪರಿಷ್ಕೃತ ಆವೃತ್ತಿ ಸಲ್ಲಿಸಿದ್ದರೂ, ಪ್ರಮಾಣಪತ್ರ ವಿತರಣೆ ಮಾಡದೇ ವಿಳಂಬ ಮಾಡುತ್ತಿದೆ,ಇದರಿಂದ ತಂಡಕ್ಕೆ ಆತಂಕ ಮೂಡಿದೆ.
ಜನ ನಾಯಗನ್ʼ ಚಿತ್ರದ ಟ್ರೈಲರ್ನಲ್ಲಿ ರಾಜಕೀಯ ಪ್ರೇರಿತ ಸಂಭಾಷಣೆಗಳಿರುವ ಕಾರಣಕ್ಕಾಗಿ ಸೆನ್ಸಾರ್ ವಿಳಂಬವಾಗುತ್ತಿರಬಹುದು ಎಂಬ ಅನುಮಾನ ಮೂಡಿದೆ.
ಸೆನ್ಸಾರ್ ಮಂಡಳಿ ನೀಡುವ ಪ್ರಮಾಣ ಪತ್ರವಿಲ್ಲದೆ, ಸಿನಿಮಾ ರಿಲೀಸ್ ಮಾಡಲು ಸಾಧ್ಯವಿಲ್ಲ. ಇದರಿಂದಾಗಿ ಸುಮಾರು 400 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಚಿತ್ರದ ಬಿಡುಗಡೆ ಮುಂದೂಡಬೇಕಾಗಬಹುದೇನೊ ಎಂಬ ಆತಂಕದಿಂದ ನಿರ್ಮಾಪಕರು ಮದ್ರಾಸ್ ಕೋರ್ಟ್ ಮೆಟ್ಟಿಲೇರಿದ್ದಾರಂತೆ.
ತಮಿಳುನಾಡು, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಬುಕಿಂಗ್ ಶುರುವಾಗಿಲ್ಲ. ಆದರೆ ಕರ್ನಾಟಕದಲ್ಲಿ ಈಗಾಗಲೇ ನೂರಾರು ಹೌಸ್ಫುಲ್ ಆಗಿವೆ. ಇಂತಹ ಸಮಯದಲ್ಲೇ ಸೆನ್ಸಾರ್ ಮಂಡಳಿ ಚಿತ್ರತಂಡಕ್ಕೆ ಶಾಕ್ ನೀಡಿದ್ದು,ಟಿಕೆಟ್ ಬುಕ್ ಮಾಡಿರುವ ಅಭಿಮಾನಿಗಳು ಚಿತ್ರ ಬಿಡುಗಡೆ ಅಸಗುವುದೊ ಇಲ್ಲವೊ ಎಂಬ ಗೊಂದಲಕ್ಕೊಳಗಾಗಿದ್ದಾರೆ.
ಇನ್ನೂ ಎರಡು ದಿನ ಟೈಮ್ ಇದೆ.ಕಾದು ನೋಡಬೇಕಿದೆ.
