(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಟಿವಿಎಸ್ ಮೊಪೆಡ್ ಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲೇ ಧಾರಣವಾಗಿ ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಮಧುವನ ಹಳ್ಳಿಯ ಬೈಪಾಸ್ ಹೆದ್ದಾರಿಯಲ್ಲಿ ನಡೆದಿದೆ.
ಪಟ್ಟಣದ ರಾಜು ನಗರದ ರವೀಶ್ ಎಂಬುವರ ಪತ್ನಿ ದಾಕ್ಷಾಯಿಣಿ (45) ಮೃತಪಟ್ಟ ಮಹಿಳೆ.
ಈಕೆ ಮದುವನಹಳ್ಳಿ ಯಲ್ಲಿರುವ ಎಸ್ ವಿ ಎಸ್ ಸೀಗೆಪುಡಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು.
ಎಂದಿನಂತೆ ಇಂದು ಕೂಡಾ ತನ್ನ ಟಿವಿಎಸ್ ಚಾಲನೆ ಮಾಡಿಕೊಂಡು ಹೋಗುತ್ತಿದ್ದ ವೇಳೆ ಮದುವನಹಳ್ಳಿ ಬಳಿ ಮಲೆ ಮಾದೇಶ್ವರ ಬೆಟ್ಟ ಹೆದ್ದಾರಿಯಲ್ಲಿ ಎದುರಿನಿಂದ ಬಂದ ತಮಿಳುನಾಡು ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮಹಿಳೆಯ ತಲೆ ಚಿದ್ರವಾಗಿದೆ.
ವಿಷಯ ತಿಳಿದ ಕೂಡಲೇ ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ತಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮೃತದೇಹವನ್ನು ಕೊಳ್ಳೇಗಾಲ ಆಸ್ಪತ್ರೆಗೆ ಸಾಗಿಸಿ ಮುಮನದಿನ ಕ್ರಮ ಕೈಗೊಂಡಿದ್ದಾರೆ.
