ಕೊಲಂಬಿಯಾ: ದಕ್ಷಿಣ ಅಮೆರಿಕದ ಕೊಲಂಬಿಯಾದಲ್ಲಿ ಸೋಮವಾರ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, 20 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ಬೂಕಂಪನದಿಂದಾಗಿ ಹತ್ತಾರು ಕಟ್ಟಡಗಳು ಕುಸಿದಿವೆ.ಭೂಕಂಪನದ ಕೇಂದ್ರಬಿಂದು ಬೊಗೋಟಾದಿಂದ 400 ಕಿ.ಮೀ ದೂರದಲ್ಲಿದೆ.
ರಿಕ್ಟರ್ ಮಾಪಕದಲ್ಲಿ 7.4 ಕಂಪನ ದಾಖಲಾಗಿದೆ. ಸ್ಯಾನ್ ಜೋಸ್ ಡೆಲ್ ಪಾಲ್ಮರ್, ಭೂಮಿಯ ಮೇಲ್ಮೈಯಿಂದ ಸುಮಾರು 107 ಕಿಲೋಮೀಟರ್ ಆಳದಲ್ಲಿ ಕಂಪನದ ಕೇಂದ್ರಬಿಂದು ಇದೆ.
ಪೆರೇರಾ ನಗರದಲ್ಲಿ ಹೆಚ್ಚು ಮಂದಿ ಮೃತಪಟ್ಟಿದ್ದಾರೆ, ಮನಿಝಾಲೆಸ್ನಲ್ಲೂ ಹಲವು ಮಂದಿ ಸಾವನಪ್ಪಿದ್ದಾರೆ.
ಕ್ವಿಬ್ಡೋ ಮತ್ತು ಚೋಕೋ ಪ್ರಾಂತ್ಯಗಳಲ್ಲಿ ಹತ್ತಾರು ಕಟ್ಟಡಗಳು ಉರುಳಿವೆ.
ನೆರೆಯ ದೇಶಗಳಾದ ಈಕ್ವೆಡಾರ್ ಮತ್ತು ವೆನೆಜುವೆಲಾದಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ.
ರಾಜಧಾನಿ ಬೊಗೋಟಾದಲ್ಲಿ ಕಟ್ಟಡಗಳನ್ನು ಖಾಲಿ ಮಾಡಿಸಲಾಗಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ.
