ಅಮೆರಿಕ: ಅಮೆರಿಕದ ಬಟ್ಲರ್ ಸ್ಮಾರಕ ವಿಮಾನ ನಿಲ್ದಾಣದ ಸಮೀಪ ಮೈದಾನದಲ್ಲಿ ಸ್ಕೈಡೈವರ್ಸ್ ಅವರನ್ನು ಕರೆದೊಯ್ಯುತ್ತಿದ್ದ ವಿಮಾನ ಪತನಗೊಂಡು 12 ಮಂದಿ ಪೈಲಟ್ ಸೇರಿ ಸ್ಕೈಡೈವರ್ಸ್ ಮೃತಪಟ್ಟಿದ್ದಾರೆ.
ಪತನಗೊಂಡ ವಿಮಾನ ಬೆಂಕಿ ಹತ್ತಿಕೊಂಡು ಸುಟ್ಟು ಕರಕಲಾಗಿದೆ.ಈ ವೇಳೆ ದಟ್ಟ ಹೊಗೆಯಿಂದಾಗಿ ಏನಾಗುತ್ತಿದೆ ಎಂಬುದು ಗೊತ್ತಾಗಿಲ್ಲ.
ಸ್ಕೈಡೈವಿಂಗ್ ಕಂಪನಿಯೊಂದು ಗುತ್ತಿಗೆ ಪಡೆದಿದ್ದ ಈ ವಿಮಾನವು ಹಾರಿದೆ,ಹಾರಾಟ ವಿಫಲವಾಗಿ ತೀಕ್ಷ್ಣವಾದ ಎಡ ತಿರುವು ಪಡೆದು ಬಟ್ಲರ್ ಸ್ಮಾರಕ ವಿಮಾನ ನಿಲ್ದಾಣದಿಂದ ಸುಮಾರು 200 ಗಜಗಳಷ್ಟು ದೂರದಲ್ಲಿ ನೆಲಕ್ಕೆ ಅಪ್ಪಳಿಸಿದೆ.
