ಮೈಸೂರು: ಮೈಸೂರಿನ ಆದಿಚುಂಚನಗಿರಿ ಒಕ್ಕಲಿಗ ಮಹಿಳಾ ಸಮಾಜದ
ವತಿಯಿಂದ ಹಸಿರಿದ್ದರೆ ಉಸಿರು ಎಂಬ ಶೀರ್ಷಿಕೆಯಡಿ ವಿಶ್ವ ಪರಿಸರದ ದಿನವನ್ನು
ಅರ್ಥಪೂರ್ಣವಾಗಿ ಆಚರಿಸಲಾಯಿತು.
ಸಮಾಜದ ಸದಸ್ಯರಿಗೆ ಗಿಡ ನೀಡುವುದರ ಮೂಲಕ ಹಸಿರನ್ನು ಉಳಿಸಿ ಬೆಳೆಸಬೇಕೆಂಬ ಸಂದೇಶ ಸಾರಲಾಯಿತು.
ಇದೇ ವೇಳೆ ಮೆನೂಪಾಸ್ ಅವೇರ್ನೆಸ್ ಬಗ್ಗೆ ಜೆ ಎಸ್ ಎಸ್ ಆಸ್ಪತ್ರೆಯ ( ಆಯುರ್ವೇದ ವಿಭಾಗ ) ಡಾಕ್ಟರ್ ತೇಜಸ್ವಿನಿ ಅವರ ತಂಡದಿಂದ ಮಾಹಿತಿ ಮತ್ತು ಸಲಹೆಗಳನ್ನು ನೀಡಲಾಯಿತು.
ಅಲ್ಲದೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು. ಇದರ ಉಪಯೋಗವನ್ನು ಸಮಾಜದ ಎಲ್ಲಾ ಸದಸ್ಯರು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ವಿಜಯ ಮಂಜುನಾಥ್, ಸದಸ್ಯರಾದ ಲತಾ ರಮೇಶ್, ಯೋಗೀಶ್ವರಿ, ಭಾಗ್ಯ, ಪ್ರೇಮ ಅಶೋಕ್, ಸರಸ್ವತಿ, ಮೀನಾ, ಲತಾ ಮಹೇಶ್, ಹಂಸ ಮತ್ತಿತರರು ಉಪಸ್ಥಿತರಿದ್ದರು.
