ಯಾದಗಿರಿ: ಜಿಲ್ಲೆಯ ಗಡಿಭಾಗದ ಬದ್ದೆಪಲ್ಲಿ ಗ್ರಾಮದಲ್ಲಿ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ 2.19 ಕೋಟಿ ರೂಪಾಯಿ ಮೊತ್ತದಲ್ಲಿ ನಿರ್ಮಾಣ ಮಾಡಿರುವ ಶೇಂಗಾ ಸಂಸ್ಕರಣಾ ಘಟಕವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉದ್ಘಾಟನೆ ಮಾಡಿದರು.
ಯಾದಗಿರಿ ರೈತರಿಗೆ ನಮಸ್ಕಾರಗಳು ಎಂದು
ಕನ್ನಡದಲ್ಲೇ ಭಾಷಣ ಆರಂಭಿಸಿದ ನಿರ್ಮಲಾ
ಅವರು,ಆಡಳಿತ ದೃಷ್ಟಿಯಿಂದ ಯಾದಗಿರಿ ಹೊಸ ಜಿಲ್ಲೆ ಮಾಡಲಾಗಿದೆ.ಇದಕ್ಕೆ ಮಾಜಿ ಮುಖ್ಯ ಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಕಾರಣಕರ್ತರು ಅದಕ್ಕೆ ಅವರಿಗೆ ಪ್ರಣಾಮಗಳು ಎಂದು ತಿಳಿಸಿದರು.
ಈ ಜಿಲ್ಲೆಯನ್ನು ಅಭಿವೃದ್ಧಿ ಮಾಡಲು ಯೋಜನೆ ರೂಪಿಸಲಾಗಿದೆ,ಇದು ಮಹತ್ವಾಕಾಂಕ್ಷೆ ಜಿಲ್ಲೆಯಾಗಿದೆ ಎಂದು ಹೇಳಿದರು.
ಯಾದಗಿರಿ ಜಿಲ್ಲೆ ಶಿಕ್ಷಣದಲ್ಲಿ ಅತ್ಯಂತ ಹಿಂದುಳಿದಿದೆ ಎಂದು ಅತ್ಯಂತ ಬೇಸರ ವ್ಯಕ್ತಪಡಿಸಿದರು.
ಹಿಂದುಳಿದ ಜಿಲ್ಲೆಯನ್ನು ಅಭಿವೃದ್ಧಿ ಮಾಡಲು ಮೋದಿಜಿ ಅವರ ಸಂಕಲ್ಪದಂತೆ ಕೆಲಸ ಮಾಡಲಾಗುತ್ತದೆ,ಅದರಂತೆ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಯನ್ನು ಅಭಿವೃದ್ಧಿ ಮಾಡಲಾಗುತ್ತದೆ.
ಯಾದಗಿರಿ ಜಿಲ್ಲೆಯು ಕೃಷಿ ಪ್ರಾಧ್ಯನತೆಯುಳ್ಳ ಜಿಲ್ಲೆಯಾಗಿದೆ ರಾಜ್ಯ ಸರ್ಕಾರ
ಏನು ಅಭಿವೃದ್ಧಿ ಮಾಡಿದೆ ಎಂದು ಪ್ರಶ್ನಿಸಿದರು.
ಕಲ್ಯಾಣ ಕರ್ನಾಟಕ ಭಾಗದ ಎಳು ಜಿಲ್ಲೆಯ ಆಯಾ ಭಾಗದ ರೈತರು ಬೆಳೆಯುವ ಕೃಷಿ ಉತ್ಪನ್ನಗಳಿಗೆ ಉತ್ತೇಜನ ನೀಡಲು ಸಂಸ್ಕರಣ ಘಟಕಗಳು ಆರಂಭ ಮಾಡಲಾಗಿದೆ ಇದರಿಂದ ಕೃಷಿಕರಿಗೆ ಅನುಕೂಲವಾಗಲಿದೆ,ರೈತರು ಸ್ವಾವಲಂಬಿ ಬದುಕು ಸಾಗಿಸಬಹುದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಶರಣಗೌಡ ಕಂದಕೂರು, ಬಿ.ಜಿ.ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ,ಬಿಜೆಪಿ ಮುಖಂಡ ಮಹೇಶರೆಡ್ಡಿ ಮುದ್ನಾಳ ಸೇರಿದಂತೆ ಅನೇಕರು ಇದ್ದರು.
