ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಬುಧವಾರ ಬೆಳ್ಳಂ ಬೆಳಗ್ಗೆ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, 17 ವಿದೇಶಿಯರು ಸೇರಿ 21 ಮಂದಿ ಮೃತಪಟ್ಟಿದ್ದಾರೆ.
ದೆಹಲಿ ದಕ್ಷಿಣ ಭಾಗದಲ್ಲಿರುವ ಮಾಳ್ವಿಯಾ ನಗರದಲ್ಲಿರುವ ಫ್ಲೌರಿಶ್ ಸ್ಟೇ ಬಿ&ಬಿ ಹೋಟೆಲ್ನಲ್ಲಿ ಬೆಳಗ್ಗೆ 8.45 ಕ್ಕೆಅಗ್ನಿ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಕಿ ಬಿದ್ದ ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಕೂಡಲೇ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು,ಅಷ್ಟರಲ್ಲಾಗಲೇ 21 ಮಂದಿ ಸಜೀವ ದಹನವಾಗಿದ್ದಾರೆ.
ಗಾಯಗೊಂಡವರನ್ನ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಹೌಜ್ ರಾಣಿಯ ಕಿರಿದಾದ ಲೇನ್ಗಳಲ್ಲಿರುವ ಈ ಕಟ್ಟಡದ ರೆಸ್ಟೋರೆಂಟ್ನ ಮೇಲೆ ಐದು ಅಂತಸ್ತಿನ ಹೋಟೆಲ್ ಅನ್ನು ಹೊಂದಿತ್ತು. ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಬಂದಿದ್ದ ವಿದೇಶಿ ಪ್ರಜೆಗಳು ಹೆಚ್ಚಾಗಿ ಹೋಟೆಲ್ನಲ್ಲಿ ತಂಗಿದ್ದರು.
ಇನ್ನು ಬೆಂಕಿ ದೊಡ್ಡ ಪ್ರಮಾಣದಲ್ಲಿ ವ್ಯಾಪಿಸಿದಾಗ ಹೊಟೆಲ್ನಿಂದ ಹೊರಬೀಳಲು ಒಂದೇ ಮಾರ್ಗ ಇದ್ದುದರಿಂದ ಹೆಚ್ಚು ಜನರು ಮೃತಪಟ್ಟಿದ್ದಾರೆ.
