ಮೈಸೂರು: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮೈಸೂರು ನಗರ ಹಾಗೂ ಜಿಲ್ಲಾ ಘಟಕದ ನೂತನ ಅಧ್ಯಕ್ಷರು, ನಿರ್ದೇಶಕರಿಗೆ ಬಸವೇಶ್ವರ ರಸ್ತೆಯ ಶ್ರೀ ಶ್ರೀ ಸಿದ್ದಗಂಗಾ ಶ್ರೀಗಳ ಭಕ್ತವೃಂದ ಸಂಘ’ದಿಂದ ಅಭಿನಂದನೆ ಸಲ್ಲಿಸಲಾಯಿತು.
ಮಹಾಸಭಾದ ಮೈಸೂರು ಘಟಕದ ಅಧ್ಯಕ್ಷರಾದ ಪ್ರಕಾಶ್, ನಿರ್ದೇಶಕರಾದ ಮಹೇಶ್, ಕಿಶೋರ್, ನಾಗೇಂದ್ರ ಹಾಗೂ ತಾಲೂಕು ಘಟಕದ ನಿರ್ದೇಶಕರಾದ ಮಾರಶೆಟ್ಟಳ್ಳಿ ಮಹದೇವು, ಕೂಡನಹಳ್ಳಿ ನಾಗರಾಜ್, ದೇವಲಾಪುರದ ಡಿ.ಪಿ. ಸುರೇಶ್, ಗುರುಪಾದಸ್ವಾಮಿ, ತಳೂರು ಮಹದೇವಸ್ವಾಮಿ, ಮಾರ್ಬಳ್ಳಿ ಗಿರೀಶ್, ನಾಗವಾಲ ಎನ್.ಬಿ. ರಾಜು ಮತ್ತು ದೂರ ಡಿ.ಎ. ಮಹಾದೇವಸ್ವಾಮಿ ಅವರನ್ನು ಗೌರವಿಸಿ, ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಸಿದ್ದಗಂಗಾ ಶ್ರೀಗಳ ಭಕ್ತವೃಂದದ ಪ್ರಮುಖರಾದ ಅಂಬಳೆ ಶಿವಣ್ಣ, ಗೆಜ್ಜೆಗಳ್ಳಿ ಶಂಕರ್, ಸಂದೀಪ್ ಚಂದ್ರಶೇಖರ್, ಗೌರಿಶಂಕರನಗರ ಬಸವರಾಜು, ದೇವಲಾಪುರ ಮಹೇಶ್, ಜಂತಕಳ್ಳಿ ಪಾಪಣ್ಣ, ಮುರುಡಗಳ್ಳಿ ಶಿವಣ್ಣ, ಎಡಳ್ಳಿ ಕಾಂತರಾಜು, ಸಾತ್ಗಳ್ಳಿ ಜಯಣ್ಣ, ಹಡ್ಜನ ಪಾಟೀಲ್ ಮಹಾದೇವ್, ಕೆ.ಆರ್. ಬ್ಯಾಂಕ್ ಭಾಸ್ಕರ್, ಕೂಡನಹಳ್ಳಿ ಸೋಮಣ್ಣ, ಮಾರ್ಬಳ್ಳಿ ಡೈರಿ ಕುಮಾರ್, ಉದ್ಬೂರ್ ಪಿತಾಮಹ, ಹಡ್ಜನ ಡೈರಿ ರಾಜಣ್ಣ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
