ಕೊಳ್ಳೇಗಾಲ: ಅಕ್ರಮವಾಗಿ ಉಡವನ್ನು ಹಿಡಿದು ಮಾರಾಟಕ್ಕಾಗಿ ಸಾಗಾಣಿಕೆ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಮೇಡಿ ಮಲ್ಲಸಂದ್ರ ಗ್ರಾಮದ ಲೇಟ್. ಶೇಖ್ ದಾವೂದ್ ಮಗ ಜಮೀರುಲ್ಲ ಶರೀಫ್ (56), ಹಾಗೂ
ಆನೇಕಲ್ ತಾಲ್ಲೂಕು ಶಿಕಾರಿ ಪಾಳ್ಯ ಗ್ರಾಮದ ಲೇಟ್, ಶೇಕ್ ಖಾಸೀಂ ಮಗ ಶೇಕ್ ರಫೀಕ್ (54) ಬಂಧಿತ ಆರೋಪಿಗಳು.
ಸೋಮವಾರ ಸಂಜೆ ಕೊಳ್ಳೇಗಾಲ ಪಟ್ಟಣದ ಹೊಸ ಅಣಗಳ್ಳಿಯ ಪಾಪನ ಕೆರೆ ಬಳಿ ಉಡವನ್ನು ಹಿಡಿದು ಮಾರಾಟ ಮಾಡುವ ಸಲುವಾಗಿ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆದರಿಸಿ ಪೊಲೀಸ್ ಮಹಾನಿರೀಕ್ಷಕರು, ಸಿ.ಐ.ಡಿ. ಅರಣ್ಯ ಘಟಕ, ಬೆಂಗಳೂರು, ಮತ್ತು ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕರಾದ ಪವನ್ಜೂರು ಅವರ ಮಾರ್ಗದರ್ಶನದಲ್ಲಿ ಕೊಳ್ಳೇಗಾಲ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಉಪನಿರೀಕ್ಷಕರಾದ ಅವಿನಾಶ್ ಹಾಗೂ ಸಿಬ್ಬಂದಿ ಬಸವರಾಜು ಎಂ, ಸಯದ್ ಜಮೀಲ್ ಅಹಮ್ಮದ್, ರಾಮಚಂದ್ರ, ಸಯ್ಯದ್ ಮುಷರಪ್, ಲತಾ, ಪ್ರಭಾಕರ್ ಮತ್ತು ಬಸವರಾಜು ಅವರು ದಾಳಿ ನಡೆಸಿದ್ದಾರೆ.
ಈ ವೇಳೆ ಇಬ್ಬರು ವ್ಯಕ್ತಿಗಳು ಒಂದು ಜೀವಂತ ಉಡವನ್ನು ಮಾರಾಟಕ್ಕೆ ಸಾಗಾಣಿಕೆ ಮಾಡುತ್ತಿರುವುದನ್ನು ಕಂಡು ತಕ್ಷಣ ಇಬ್ಬರು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳಿಂದ ಒಂದು ಜೀವಂತ ಉಡವನ್ನು ವಶಪಡಿಸಿಕೊಂಡು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
