ಮೈಸೂರು: ರೋಟರಿ ಮೈಸೂರು ಅಂಬಾರಿ ವತಿಯಿಂದ ರೋ ಜಗದೀಶ್. ಎಲ್ ಅವರಿಗೆ
ರೊಟೇರಿಯನ್2025.26 ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಮೈಸೂರಿನ ವಿಜಯನಗರ ರೈಲ್ವೆ ಬಡಾವಣೆ ಎರಡನೇ ಹಂತ ರೋಟರಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೋ ಜಗದೀಶ್. ಎಲ್. ರವರು ಕ್ಲಬ್ ಗೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ರೋಟರಿ ಮೈಸೂರು ಅಂಬಾರಿ ಕ್ಲಬ್ ನೀಡುವ ವರ್ಷದ ರೊಟೇರಿಯನ್ 2025.26 ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ರೋಟರಿ ಜಿಲ್ಲೆ ಗೌರ್ನರ್ ಎಲೆಕ್ಟ್ ಮೇಜರ್ ಡೋನರ್ ರೋ ಯಶಸ್ವಿನಿ ಎಸ್.ಸೋಮಶೇಖರ್ ಅವರು ಪ್ರಶಸ್ತಿ ನೀಡಿ ಗೌರವಿಸಿದರು.
ಈ ವೇಳೆ ಮಾತನಾಡಿದ ರೋ ಯಶಸ್ವಿನಿ .ಎಸ್.ಸೋಮಶೇಖರ್,
ರೋ ಜಗದೀಶ್ ಅವರು ಹಲವು ವರ್ಷಗಳಿಂದ ಸಮಾಜಸೇವೆಯನ್ನು ಸಲ್ಲಿಸುತ್ತಾ ರೋಟರಿ ಸಂಸ್ಥೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪಲ್ಸ್ ಪೋಲಿಯೋ ಹೆಲ್ತ್ ಕ್ಯಾಂಪ್ ಗ್ರಾಮೀಣ ಪ್ರದೇಶದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ನಡೆಸಿದ್ದಾರೆ ಎಂದು ತಿಳಿಸಿದರು.
ಪರಿಸರ ಉಳಿಯುಗಾಗಿ ಬಡಾವಣೆಗಳಲ್ಲಿ ಗಿಡ ನೆಟ್ಟು ಸ್ವಚ್ಛತೆ ಮಾಡಿದ್ದಾರೆ. ಟಿ .ಆರ್ .ಎಫ್ ಮತ್ತು ಪಲ್ಸ್ ಪೋಲಿಯೋ ಗೆ ದೇಣಿಗೆ ನೀಡಿದ್ದಾರೆ ಮೈಸೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ, ಮೈಸೂರು ಮಹಾನಗರ ಪಾಲಿಕೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.
ವಲಯ ಎಂಟರ್ ಅಸಿಸ್ಟೆಂಟ್ ಗವರ್ನರ್ ರೋ ಕಿರಣ್ ಕುಮಾರ್ ವಲಯ ಎಂಟರ ಸೇನಾನಿಗಳಾದ ರೋ ಸ್ವಾಮಿ, ರೋಟರಿ ಮೈಸೂರು ಅಂಬಾರಿ ಅಧ್ಯಕ್ಷರಾದ ರೋ.ಮಂಜುನಾಥ್ ವಿ, ಕಾರ್ಯದರ್ಶಿ ರೋ . ಡಾ.ಲಕ್ಷ್ಮೀಶ್ ಕೆ ಹಾಗೂ ರೋಟರಿ ಮೈಸೂರು ಅಂಬಾರಿ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
