ಮೈಸೂರು: ಶ್ರಾವಣ ಮಾಸದ ಮೊದಲ ಶುಕ್ರವಾರ ಪ್ರಯುಕ್ತ ಪಾರ್ವತಿ ದೇವಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ಮೈಸೂರಿನ ಅಗ್ರಹಾರದ ನವಗ್ರಹ ದೇವಸ್ಥಾನದ ಆವರಣದಲ್ಲಿರುವ ತಾಯಿ ಪಾರ್ವತಿ ದೇವಿಗೆ ಇಂದು ಬೇಜಾರು ಅಭಿಷೇಕ ಮಾಡಲಾಯಿತು.
ಶಿವಾರ್ಚಕ ಎಸ್ ಯೋಗಾನಂದ್ ಮತ್ತು ಅವರ ಪತ್ರ ಅಭಿನಂದನ್ ಪೂಜೆ ನೆರವೇರಿಸಿದರು.
ಅಭಿನಂದನ್ ಅವರು ದೇವಿಗೆ ವಿಶೇಷ ಅಲಂಕಾರ ಮಾಡಿದ್ದು, ತಾಯಿ ತ್ರಿಶೂಲ ಧಾರಿಯಾಗಿ ಚಾಮುಂಡೇಶ್ವರಿ ಯಂತೆ ಕಂಗೊಳಿಸುತ್ತಾ ಎಲ್ಲರನ್ನೂ ಆಶೀರ್ವದಿಸುತ್ತಿದ್ದಾಳೆ.
