ಕೊಳ್ಳೇಗಾಲ: ಕೊಳ್ಳೇಗಾಲ ಪಟ್ಟಣದ ಜೆ ಎಸ್ ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಜೆ.ಎಸ್.ಎಸ್. ವಿದ್ಯಾಪೀಠ, ಕನ್ನಡ ಸಂಸ್ಕೖತಿ ಇಲಾಖೆ, ರಂಗವಾಹಿನಿ ಸಂಸ್ಥೆ
ವತಿಯಿಂದ ಬುದ್ಧ, ಬಸವ, ಬೀಮರ ಬೆಳದಿಂಗಳ ಹಬ್ಬ ಸಮಾರಂಭವನ್ನು ಅರ್ಥ ಪೂರ್ಣವಾಗಿ ಆಯೋಜಿಸಲಾಯಿತು.
ಈವೇಳೆ ಸಮಾರಂಭದಲ್ಲಿ ಖ್ಯಾತ ಗಾಯಕ ಸಿ.ಎಂ ನರಸಿಂಹಮೂರ್ತಿ ಮಾಂಬಳ್ಳಿ ಅರುಣ್ ತಂಡದ ಸದಸ್ಯರು
ವಿದ್ಯಾರ್ಥಿಗಳ ಬುದ್ದ, ಬಸವ, ಬೀಮರ ಗೀತೆಗಳನ್ನು ಸುಮಧುರವಾಗಿ ಹಾಡಿ ರಂಜಿಸಿದರು.
ಸಮಾರಂಭವನ್ನು ಜ್ಯೋತಿ ಬೆಳೆಗಿಸುವ ಮೂಲಕ ಖ್ಯಾತ ಚಿಂತಕರು, ಸಂಸ್ಕೖತಿ ಮತ್ತು ಆಧ್ಯಾತ್ಮಿಕ ಚಿಂತಕರೂ, ನಿವೖತ್ತ ಮುಖ್ಯ ಎಂಜಿನಿಯರ್ ಆದ ಶರಣ ಶಂಕರ್ ದೇವನೂರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಬುದ್ದ- ಜಗತ್ತು ಕಂಡ ದಾರ್ಶನಿಕರು, ಆತ ವಿಜ್ಞಾನಿ ಮಾತ್ರವಲ್ಲ ವೈದ್ಯ, ಜಗತ್ತನ್ನು ಸರಿಯಾಗಿ ಅರ್ಥೈಸಿಕೊಟ್ಟ ಮೊಟ್ಟ ಮೊದಲ ವಿಜ್ಞಾನಿ, ಲೋಕದ ಗಾಯಕ್ಕೆ ಮದ್ದಾಗುವ ಮೂಲಕ ವೈದ್ಯನಾದವನು ಬುದ್ದ, ಬುದ್ದನ ವಿಚಾರಧಾರೆ, ಚಿಂತನಾ ಧಾರೆ,
ಬಸವಣ್ಣ, ಅಂಬೇಡ್ಕರ್ ಅವರ ಸಿದ್ದಾಂತಗಳು ಸರ್ವ ಕಾಲಕ್ಕೂ ಪ್ರಸ್ತುತ ಎಂದು ಹೇಳಿದರು.
ನನ್ನ ದೖಷ್ಟಿಯಲ್ಲಿ ಬುದ್ದ ಬೀಜವಿದ್ದಂತೆ , ಬಸವಣ್ಣ ಮಾಮರ, ಅಂಬೇಡ್ಕರ್ ಅವರು ಫಲವಿದ್ದಂತೆ, ನಾವೆಲ್ಲರೂ ಸಹಾ ಇವುಗಳ ಫಲಾನುಭವಿಗಳು ಎಂದು ಶರಣ ಶಂಕರ್ ದೇವನೂರು ವ್ಯಾಖ್ಯಾನಿಸಿದರು.
ಬಸವಣ್ಣನ ವಚನಗಳಲ್ಲಿ ಬದುಕಿನ ಸಾರವಿದೆ. ಇದನ್ನ ಅರಿತುಕೊಳ್ಳಬೇಕು, ಬದುಕು ಬೆಳಕಾಗಬೇಕು, ಬದುಕು ಬಯಲಾಗಬೇಕು ಇದೆ ಜೀವನ, ನಮ್ಮ ಬದುಕು ಸಹಾ ಹೂವಿನಂತಾಗಬೇಕು , ವಿದ್ಯಾರ್ಥಿನಿ ಯರು ಪೋಷಕರ ಆಶಯ ಈಡೇರಿಸುವಂತಾಗಬೇಕು, ಮೌಲ್ಯಯುತ ಬದುಕು ಕಟ್ಟಿಕೊಳ್ಳುವ ಕನಸು ಕಾಣಿ,
ಸಾಧನೆಗೈಯಿರಿ ಎಂದು ಶರಣ ಶಂಕರ್ ದೇವನೂರು ಸಲಹೆ ನೀಡಿದರು.
ಮೈಸೂರಿನ ಹಿರಿಯ ಪತ್ರಕರ್ತ ರಾದ ಅಂಶಿಪ್ರಸನ್ನ ಕುಮಾರ್ ಮಾತನಾಡಿ, ಬುದ್ದ, ಬಸವ, ಬೀಮರ ಬೆಳದಿಂಗಳ ಹಬ್ಬ ಅರ್ಥಪೂರ್ಣ ವಾಗಿದೆ, ಯುವ ಪೀಳಿಗೆ
ಸಂಸ್ಕಾರವಂತರಾಗಬೇಕು, ಸಂಸ್ಕಾರ ಬೆಳೆಸಿಕೊಂಡು ಮೌಲ್ಯಯುತ ಸಂದೇಶಗಳನ್ನು ಬದುಕಿನುದ್ದಕ್ಕೂ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮ ದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷ ದೊರೆಸ್ವಾಮಿ, ಪ್ರಾಂಶುಪಾಲ ಮಹದೇವಸ್ವಾಮಿ, ರಂಗವಾಹಿನಿ ಸಂಸ್ಥೆಯ ಅಧ್ಯಕ್ಷ ಸಿ.ಎಂ. ನರಸಿಂಹಮೂರ್ತಿ, ಗಾಯಕ ಮಾಂಬಳ್ಳಿ ಅರುಣ್, ಚಿಂತಕ ಶಿವಣ್ಣ ಇಂದ್ವಾಡಿ, ಸಾಹಿತಿ ಎನ್ಕೆ ದಿಲೀಪ್, ಯೋಗೀಶ್ ಮತ್ತಿತರರು ಪಾಲ್ಗೊಂಡಿದ್ದರು.
