ಮೈಸೂರು: ಚಾಮರಾಜ ವಿಧಾನಸಭಾ ಕ್ಷೇತ್ರದ ಎರಡು ವಾರ್ಡ್ಗಳಲ್ಲಿ ಒಟ್ಟು 2.54 ಕೋಟಿ ರೂ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ. ಹರೀಶ್ ಗೌಡ ಅವರು ಗುದ್ದಲಿ ಪೂಜೆ ನೆರವೇರಿಸಿದರು.
ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ-4 ವ್ಯಾಪ್ತಿಯ ಗೋಕುಲಂ ವಾರ್ಡ್ನಲ್ಲಿ ನಗರಪಾಲಿಕೆ ಅನುದಾನದಡಿ 2 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ, ಗೋಕುಲಂ ಕಾಂಟೂರ್ ರಸ್ತೆಯ ಸಿದ್ದಲಿಂಗೇಶ್ವರ ಗ್ಯಾಸ್ ಏಜೆನ್ಸಿಯಿಂದ 1ನೇ ಮುಖ್ಯ ರಸ್ತೆಯ ಡಾ. ಪುನೀತ್ ರಾಜ್ಕುಮಾರ್ ವೃತ್ತದವರೆಗೆ ಯುಜಿಡಿ ಕಾಮಗಾರಿಯಿಂದ ಹಾಳಾಗಿರುವ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಈ ವೇಳೆ ಹರೀಶ್ ಗೌಡ ತಿಳಿಸಿದರು.
ವಲಯ ಕಚೇರಿ-4 ವ್ಯಾಪ್ತಿಯ ವಿ.ವಿ. ಮೊಹಲ್ಲಾ ವಾರ್ಡ್ನಲ್ಲಿ SFC ವಿಶೇಷ ಅನುದಾನದಡಿ 54 ಲಕ್ಷ ರೂ ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಶಾಸಕರು
ಚಾಮರಾಜ ಕ್ಷೇತ್ರದ ಪ್ರತಿ ರಸ್ತೆಯೂ ಉತ್ತಮವಾಗಬೇಕು. ಜನರ ಮೂಲಭೂತ ಸೌಕರ್ಯವೇ ನನ್ನ ಆದ್ಯತೆ. ಶೀಘ್ರವಾಗಿ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷರಾದ ರವಿ ಮಂಚೇಗೌಡನ ಕೊಪ್ಪಲು, ಮಾಯಮ್ಮ,ವಾರ್ಡ್ ಅಧ್ಯಕ್ಷರಾದ ದಿನೇಶ್, ಜಯಪ್ರಕಾಶ್ , ಗಿರಿಜಾಂಬ,ಗಾಯತ್ರಿ ನಾರಾಯಣಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ನಿಶಾಂತ್ ಪಟೇಲ್,ಮುಖಂಡರಾದ ಸುಶೀಲ ಮರೀಗೌಡ ,ಲಾಯರ್ ಶ್ರೀನಿವಾಸ್, ಟೆಂಟ್ ಶ್ರೀನಿವಾಸ್, ಬಸವರಾಜು, ರೇಖಮ್ಮ , ಲಕ್ಷ್ಮೀ ಶಿವರಾಜು, ಇಮಾಂಶು,ನಗರ ಪಾಲಿಕೆ ಮಾಜಿ ಸದಸ್ಯರಾದ ರಮೇಶ್, ಮೋಹನ್,ತೇಜಸ್ ಗೌಡ ಹಾಗೂ ಕಾರ್ಯಕರ್ತರು ಮತ್ತು ಸ್ಥಳೀಯರು ಹಾಜರಿದ್ದರು.
