ಮೈಸೂರು: ಅನೇಕ ವರ್ಷಗಳಿಂದ ರೈತರಪರ ಹೋರಾಟಗಳನ್ನು ಮಾಡುತ್ತಾ ಜೀವನವನ್ನೇ ರೈತರಿಗಾಗಿ, ಹೋರಾಟಕ್ಕಾಗಿ, ಮುಡಿಪಾಗಿಟ್ಟ ಹೊನ್ನುರು ಪ್ರಕಾಶ್ ಅವರಿಗೆ ಬೆದರಿಕೆ ಹಾಕಿರುವುದು ಖಂಡನೀಯ ಎಂದುಕನ್ನಡ ಕ್ರಾಂತಿದಳ ಅಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ಹೇಳಿದ್ದಾರೆ.
ಹೊನ್ನೂರು ಪ್ರಕಾಶ್, ಕಬಿನಿ ಜಲಾಶಯದ ಬಳಿ ಅಕ್ರಮವಾಗಿ ನಿರ್ಮಿಸಲಾದ ರೆಸಾರ್ಟ್ ತೆರವಿಗಾಗಿ ಮತ್ತು ರಾಷ್ಟ್ರೀಯ ಉದ್ಯಾನವನವಾದ ಬಂಡಿಪುರ ಅಭಯಾರಣ್ಯ ಉಳಿವಿಗೆ ನಿರಂತರ ಹೋರಾಟ ಮಾಡುತ್ತಾ ಬಂದಿರುವುದನ್ನು ಇಡೀ ದೇಶವೇ ಗಮನಿಸಿದೆ.
ಇಂತಹ ನಿಷ್ಕಳಂಕ ಹೋರಾಟಗಾರರಿಗೆ ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಾಕುವ ಮೂಲಕ ಬೆದರಿಕೆ ಸಂದೇಶ ನೀಡುತ್ತಿರುವುದನ್ನು ಕನ್ನಡ ಕ್ರಾಂತಿದಳ ಸಂಘಟನೆಯ ವತಿಯಿಂದ ತೀವ್ರವಾಗಿ ಖಂಡಿಸುತ್ತೇವೆ ತೇಜಸ್ವಿ ನಾಗಲಿಂಗ ಸ್ವಾಮಿ ತಿಳಿಸಿದ್ದಾರೆ.
ರೈತ ನಾಯಕ ಹೊನ್ನುರು ಪ್ರಕಾಶ್ ಅವರಿಗೆ ಬೆದರಿಕೆ ಸಂದೇಶ ನೀಡುತ್ತಿರುವುದನ್ನು ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಕೂಡಲೇ ಅವರಿಗೆ ಸೂಕ್ತ ಭದ್ರತೆ ಒದಗಿಸಿ ಗನ್ ಮ್ಯಾನ್ ನೀಡಬೇಕೆಂದು ತೇಜಸ್ವಿ ಮನವಿ ಮಾಡಿದ್ದಾರೆ.
ಹೊನ್ನುರು ಪ್ರಕಾಶ್ ಅವರಿಗೆ ಬೆದರಿಕೆ ಹಾಕಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ವಿಡಿಯೋ ಮಾಡಿರುವವರ ವಿರುದ್ಧ ಪೋಲಿಸ್ ಇಲಾಖೆ ಪ್ರಕರಣ ದಾಖಲಾಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಪೋಲಿಸ್ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
