ಮೈಸೂರು: ಮಹಿಳಾ ಆಯೋಗದಂತೆ ಶೀಘ್ರ ಪುರುಷರ ಆಯೋಗ ರಚನೆ ಮಾಡುವುಂತೆ ಮಾಜಿ ಸಚಿವ ಎಚ್, ವಿಶ್ವನಾಥ್ ಅವರು ಒತ್ತಾಯ ಮಾಡಿರುವುದು ಸ್ವಾಗತಾರ್ಹ ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ಹೇಳಿದ್ದಾರೆ.
ಸಂವಿಧಾನದ ಪ್ರಕಾರ ಗಂಡು ಹೆಣ್ಣು ಸರಿ ಸಮಾನರು,ಮಹಿಳೆಯರಂತೆ ವಿವಿಧ ಕಾರಣಗಳಿಂದ ಪುರುಷರೂ ನೊಂದಿರುತ್ತಾರೆ, ದೌರ್ಜನ್ಯ ಕೂಡಾ ಆಗುತ್ತದೆ ಹಾಗಾಗಿ ಪುರುಷರ ರಕ್ಷಣೆಗೂ ಆಯೋಗದ ಅಗತ್ಯವಿದೆ ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಒತ್ತಾಯಿಸಿದ್ದಾರೆ.
ಸಮಾಜದಲ್ಲಿ ಕೆಲವು ವರ್ಷಗಳಿಂದ ಪುರುಷರ ಮೇಲೆ ಅನ್ಯಾಯ, ದೌರ್ಜನ್ಯ, ಹತ್ಯೆ ಯಂತಹ ಪ್ರಕರಣಗಳು ಹೆಚ್ಚುತ್ತಿವೆ ನಾನಾ ಕಾರಣಗಳಿಂದ ನೊಂದ ಪುರುಷರ ಹಕ್ಕುಗಳ ರಕ್ಷಣೆ ಹಾಗೂ ಅವರಿಗೆ ನ್ಯಾಯ ಒದಗಿಸುವ ಸಲುವಾಗಿ ಕಾರ್ಯನಿರ್ವಹಿಸಲು ಮಹಿಳಾ ಆಯೋಗದಂತೆ ಪುರುಷರ ಆಯೋಗವನ್ನು ಶೀಘ್ರವೇ ರಚಿಸಬೇಕು ಎಂದು ತೇಜಸ್ವಿ ನಾಗಲಿಂಗಸ್ವಾಮಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಸಧ್ಯದಲ್ಲೇ ಮುಖ್ಯಮಂತ್ರಿಗಳಿಗೆ ಮನವಿ ನೀಡುವುದಾಗಿ ತೇಜಸ್ವಿ ತಿಳಿಸಿದ್ದಾರೆ.
