ಮೈಸೂರು: ಮೈಸೂರು ನಗರಾ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಚಾಮುಂಡೇಶ್ವರಿ ತಾಯಿ ವರ್ಧಂತಿ ಹಿನ್ನೆಲೆಯಲ್ಲಿ ಬೆಟ್ಟ ಹತ್ತಿ ಬರುವ ಹತ್ತು ಸಾವಿರ ಭಕ್ತರಿಗೆ ಲಡ್ಡು ವಿತರಿಸಲಾಯಿತು.
ಚಾಮುಂಡಿ ಬೆಟ್ಟದ ಪಾದದ ಬಳಿ ಲಡ್ಡು ವಿತರಿಸಿ, ಮಾತನಾಡಿದ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ ಟಿ ಪ್ರಕಾಶ್ ಅವರು,ಸಮಸ್ತ ಜನತೆಗೂ ದೇವಿ ಚಾಮುಂಡೇಶ್ವರಿ ಒಳಿತು ಮಾಡಲಿ ಹಾರೈಸಿದರು.
ಈ ಸಂದರ್ಭದಲ್ಲಿ ಕಡಕೋಳ ಜಗದೀಶ್,
ವಿಕ್ರಂ ಅಯ್ಯಂಗಾರ್, ರಂಗನಾಥ್, ನಿರ್ಮಲ, ಸವಿತಾ ಘಾಟ್ಕೆ, ಹರೀಶ್ ಮತ್ತಿತರರು ಹಾಜರಿದ್ದರು.
