ಸೂಪರ್ ಹಿಟ್ ಫಿಲಮ್ ಸು ಫ್ರಮ್ ಸೋ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ
ಸುಮೇಧ್ ಇದೀಗ ತುಳಸಿ ಹಾಡು ಕೂಡಾ ಹಿಟ್ ಆಗಿದ್ದು ಕೇಳಲು ಕಿವಿಗೆ ಬಲು ಇಂಪು.
ಸಂಗೀತ ಸಂಯೋಜಕ ಸುಮೇಧ್ ಅವರ ‘ತುಳಸಿ’ ಹಾಡು ಮೆಚ್ಚುಗೆ ಗಳಿಸಿದೆ.
ಪುರಂದರ ದಾಸರ ದಾಸಪದಗಳನ್ನು ಆಧರಿಸಿದ ಈ ಹಾಡು, ಉತ್ತಮ ಸಂಗೀತ ಮತ್ತು ಛಾಯಾಗ್ರಹಣದಿಂದ ಗಮನ ಸೆಳೆಯುತ್ತಿದೆ. ಅವರ ಈ ಹಾಡು ಇತರ ಆಲ್ಬಂಗಳಿಗೆ ಪ್ರೇರಣೆಯಾಗಿದೆ.
‘ಸು ಫ್ರಮ್ ಸೋ’ ಸಿನಿಮಾದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿರುವ ಸುಮೇಧ್ ಅವರು ಕಾಲೇಜು ಓದುವಾಗಲೇ ಇಂಪಾದ ಹಾಡುಗಳನ್ನು ನೀಡಿ ಗಮನ ಸೆಳೆದಿದ್ದರು.
ಇದೀಗ ಅವರು ತಮ್ಮದೇ ಆದ ಕ್ರಿಯೇಷನ್ಗೆ ಇಳಿದಿದ್ದಾರೆ. ಆಲ್ಬಂ ಹಾಡುಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅದರಲ್ಲೂ ‘ತುಳಸಿ’ ಹಾಡು ಮೆಚ್ಚುಗೆ ಪಡೆದುಕೊಂಡಿದೆ. ನೋಡಲು ಹಾಗೂ ಕೇಳಲೂ ಮುದ ನೀಡುವ ಹಾಡು ಈಗ ಟ್ರೆಂಡ್ನಲ್ಲಿದೆ.
‘ತುಳಸಿ’ ಎಂಬುದು ಪುರಂದರ ದಾಸರ ದಾಸಪದಗಳಿಂದ ತೆಗೆದುಕೊಳ್ಳಲಾಗಿದೆ. ಇದಕ್ಕೆ ಸಂಗೀತ ಸಂಯೋಜನೆ ಮಾಡಿದ್ದು ಸುಮೇಧ್ ಅವರು. ಹಾಡು ಕೇಳಲು ಎಷ್ಟು ಇಂಪಾಗಿದೆಯೋ, ಛಾಯಾಗ್ರಹಣ ವಿಷಯದಲ್ಲೂ ಅಷ್ಟೇ ಅಚ್ಚುಕಟ್ಟನ್ನು ಪಾಲಿಸಲಾಗಿದೆ. ಬಾಲ ಕಲಾವಿದೆಯಾಗಿ ಪ್ರಣ್ವಿ ಅಕ್ಷಯ್, ಮತ್ತೊಂದು ಪಾತ್ರದಲ್ಲಿ ಸುಷ್ಮಿತಾ ಭಟ್ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
ವಿಡಿಯೋ ಮೂಲಕ ಸೂಕ್ಷ್ಮ ವಿಷಯಗಳನ್ನು ಹೇಳುವ ಪ್ರಯತ್ನ ನಡಿದೆ.
ರೆಕ್ಟ್ಯಾಂಗಲ್ ತಂಡ ಹಾಡಿನ ಛಾಯಾಗ್ರಗಣ ಮಾಡಿದೆ ಎಂದು ಸುಮೇಧ್ ಹೇಳಿದ್ದಾರೆ,ವಿಷ್ಣುರಾವ್ ಅವರು ಇದನ್ನು ನಿರ್ದೇಶನ ಮಾಡಿದ್ದಾರೆ ಕನ್ನಡದಲ್ಲಿ ಮ್ಯೂಸಿಕ್ ಆಲ್ಬಂಗಳು ಕಡಿಮೆ, ನಮ್ಮವರು ಯಾವುದಕ್ಕೂ ಕಡಿಮೆ ಇಲ್ಲ. ಒಳ್ಳೆಯ ಸಾಹಿತ್ಯ ಬರೆಯುವವರು ಇದ್ದಾರೆ, ಹೆಚ್ಚು ಆಲ್ಬಂಗಳು ಬರಬೇಕು ಎಂದು ಆಶಿಸಿದ್ದಾರೆ.
