ಮೈಸೂರು: ಮೈಸೂರಿನ ಪ್ರಸಿದ್ದ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿದ್ದ 25 ವರ್ಷದ ಗಂಡು ಜಿರಾಫೆ ಯುವರಾಜ ಮೃತಪಟ್ಟಿದೆ.
ಯುವರಾಜ 1987ರಲ್ಲಿ ಜರ್ಮನಿಯಿಂದ ತಂದಿದ್ದ ಹೆನ್ರಿ ಮತ್ತು ಹನಿ ಜಿರಾಫೆಗಳಿಗೆ 9ನೇ ಮರಿಯಾಗಿ 2001ರ ಡಿಸೆಂಬರ್ 7ರಂದು ಜನಿಸಿದ್ದ.
ಪ್ರವಾಸಿಗರ ಕೈ ಆರೈಕೆ ಮೃಗಾಲಯದ ಸಿಬ್ಬಂದಿಗಳ ಪ್ರೀತಿಯಲ್ಲಿ ಬೆಳೆದ ಯುವರಾಜ ಮೃಗಾಲಯದಲ್ಲಿ ಹೆಚ್ಚು ವರ್ಷ ಅಂದರೆ 25 ವರ್ಷಗಳ ಕಾಲ ಬದುಕಿದ ಜಿರಾಫೆ ಎಂಬ ಖ್ಯಾತಿ ಪಡೆದಿದ್ದಾನೆ.
ಹನಿ ಮತ್ತು ಹೆನ್ರಿ ಜಿರಾಫೆಗಳಿಗೆ ಜನಿಸಿದ ಕೃಷ್ಣರಾಜ, ಚಾಮರಾಜ, ನರಸಿಂಹರಾಜ ಮತ್ತು ಯುವರಾಜ ಜಿರಾಫೆಗಳಲ್ಲಿ ಈವರೆಗೆ ಹೆಚ್ಚು ಕಾಲ ಬದುಕಿದ ಜಿರಾಫೆ ಯುವರಾಜ.
ಬುಧವಾರ ಯುವರಾಜ ಸಾವನ್ನಪ್ಪಿದೆ.ಇದರ ಸಾವು ಮೃಗಾಲಯಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ ಎಂದು ಝೂ ಅಧಿಕಾರಿಗಳು ತಿಳಿಸಿದ್ದಾರೆ.
