ಮೈಸೂರು: ವಿಶೇಷ ಚೇತನರು ತಮ್ಮ ಜೀವನ ನಡೆಸಲು ಬೇರೆಯವರನ್ನು ಅವಲಂಬಿಸದೆ ಸ್ವಯಂ ಉದ್ಯೋಗ ಕೈಗೊಂಡು ಸ್ವಾವಲಂಬಿಗಳಾಗಬೇಕೆಂದು ಮೈಸೂರು ಮಹಾನಗರ ಪಾಲಿಕೆ ಆಡಳಿತಾಧಿಕಾರಿ ನಿತೇಶ್ ಪಾಟೀಲ್ ಸಲಹೆ ನೀಡಿದರು.
ಮೈಸೂರು ಮಹಾನಗರ ಪಾಲಿಕೆ, ಸೆಸ್ಕೋ ಫೌಂಡೇಶನ್ ಬೆಂಗಳೂರು ಇವರ ಸಹಯೋಗದಲ್ಲಿ ವಿಕಾಸ ಪಥದಲ್ಲಿ ವಿಶೇಷಚೇತನರ ಹಾಗೂ ಮಹಿಳೆಯರ ಹೆಜ್ಜೆ ಸೌರ ಬೆಂಬಲಿತ ಕಾರ್ಯಾಗಾರ ಹಾಗೂ ಜೀವನೋಪಾಯ ಪರಿಹಾರಗಳ ಪ್ರದರ್ಶನವನ್ನು ಶ್ರೀ ರಂಗಚಾರ್ಲು ಪುರಭವನದಲ್ಲಿ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಸೌರ ಚಾಲಿತ ಯಂತ್ರಗಳಿಂದ ವಿವಿಧ ವಸ್ತುಗಳ ತಯಾರಿಕೆ ಮಾಡಬಹುದು ವಿಶೇಷ ಚೇತನರು ಕೌಶಲ್ಯಾಧಾರಿತ ತರಬೇತಿ ಪಡೆದು ಜೀವನೋಪಾಯ ಹಾಗೂ ಸ್ವಯಂ ಉದ್ಯೋಗವನ್ನು ಸೃಷ್ಟಿಸಿಕೊಳ್ಳಬಹುದು ಎಂದರು ಹೇಳಿದರು.
ವಿಶೇಷ ಚೇತನರಿಗೆ ಸರ್ಕಾರದಿಂದ ಹಲವಾರು ಯೋಜನೆಗಳನ್ನು ನೀಡಲಾಗುತ್ತಿದೆ, ಮಹಾನಗರ ಪಾಲಿಕೆ ಹಾಗೂ ವಿಕಲಚೇತನ ಕಲ್ಯಾಣ ಇಲಾಖೆ ವತಿಯಿಂದ ವಿಶೇಷ ಚೇತನರು ಸರ್ಕಾರಿ ಯೋಜನೆಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ವಿಶೇಷ ಚೇತನರು ಆಹಾರ ಸಂಶೋಧನೆ ಘಟಕವನ್ನು ಪ್ರಾರಂಭಿಸಲು ಸರ್ಕಾರದಿಂದ ಶೇ 50 ರಷ್ಟು ಸಬ್ಸಿಡಿ ಪಡೆಯಬಹುದು. ಇದರಿಂದ ಅವರು ಉದ್ಯಮಿಗಳಾಗಿ ಬೇರೆಯವರಿಗೆ ಉದ್ಯೋಗ ನೀಡುವುದರೊಂದಿಗೆ ಆರ್ಥಿಕವಾಗಿ ಜೀವನಮಟ್ಟ ಸುಧಾರಿಸಿಕೊಳ್ಳಬಹುದು ಎಂದು ನಿತೇಶ್ ಪಾಟೀಲ್ ತಿಳಿಹೇಳಿದರು.
ಮಹಾನರ ಪಾಲಿಕೆಯಲ್ಲಿ ಶೇ 5 ರಷ್ಟು ಅನುದಾನವನ್ನು ವಿಶೇಷ ಚೇತನರಿಗೆ ಮೀಸಲಿಡಲಾಗಿದೆ, ವಿಶೇಷ ಚೇತನರು ಸರ್ಕಾರದ ಯೋಜನೆಗಳನ್ನು ನೇರವಾಗಿ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ ಅವರು ಮಾತನಾಡಿ, ಸರ್ಕಾರದ ಯೋಜನೆಗಳು ಮತ್ತು ಯಂತ್ರೋಪಕರಣಗಳನ್ನು ಹೇಗೆ ಬಳಸಬೇಕು ಎಂದು ಮಹಾನಗರ ಪಾಲಿಕೆ ಹಾಗೂ ಸೆಲ್ಕೋ ಫೌಂಡೇಶನ್ ಸಹಯೋಗದಲ್ಲಿ ನಡೆಸುತ್ತಿರುವ ಈ ಕಾರ್ಯಗಾರದಲ್ಲಿ ವಿಶೇಷ ಚೇತನರು ಅನುಕೂಲಗಳನ್ನು ಪಡೆದುಕೊಳ್ಳಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಖ್ ತಸ್ವೀರ್ ಆಶಿಫ್,ಮೈಸೂರು ಮಹಾನಗರ ಪಾಲಿಕೆ ಉಪಾಯುಕ್ತೆ ವೀಣಾ,ಜಿಲ್ಲಾ ವಿಕಲಚೇತನರ ಕಲ್ಯಾಣ ಅಧಿಕಾರಿ ರಾಘವೇಂದ್ರ, ಬೆಂಗಳೂರು ಸೆಲ್ಕೋ ಇಂಡಿಯಾ ಫೌಂಡೇಶನ್ ನ ರುಚ ಲಿಮಯೆ, ಏರಿಯಾ ಮ್ಯಾನೇಜರ್ ಸುಕುಮಾರ್ ಕೆ, ಸಂಯೋಜಕರು ಫಣೀಂದ್ರ ಸಿಂಗ್, ಸಿ.ಸಿ ಎಸ್.ಟಿ ಯೋಜನೆ ನಿರ್ದೇಶಕ ಕೆ.ಆರ್.ಶಂಕರ, ಡಿ.ಡಿ.ಎ.ಎಸ್.ಸಿ ರಾಜ್ಯ ಸಂಯೋಜಕ ನರಸಿಂಹಮೂರ್ತಿ,ಮತ್ತಿತರರು ಉಪಸ್ಥಿತರಿದ್ದರು.
