ಮೈಸೂರು: ಭಾರತದ ಮೊದಲ ಮಹಿಳಾ ಶಿಕ್ಷಕಿ, ಅಕ್ಷರದವ್ವ ಸಾವಿತ್ರಿಬಾಯಿ ಫುಲೆಯವರ ಜನ್ಮದಿನದಂದು ಬಿಜೆಪಿ ಚಾಮರಾಜ ಕ್ಷೇತ್ರದ ಎಸ್.ಸಿ ಮೋರ್ಚಾ ವತಿಯಿಂದ ಪುಷ್ಪ ನಮನ ಸಲ್ಲಿಸಲಾಯಿತು.
ಸಾಮಾಜಿಕ ಸುಧಾರಣೆಯ ಅಗ್ರಗಣ್ಯ ನಾಯಕಿಯಾಗಿ ಮಹಿಳೆಯರ ಶಿಕ್ಷಣ, ದಲಿತರ ಹಕ್ಕುಗಳು ಮತ್ತು ಸಮಾನತೆಗಾಗಿ ಅವಿರತವಾಗಿ ಹೋರಾಡಿದ ಮಹಾನ್ ಚಿಂತಕಿಯಾಗಿದ್ದರು.
ಜ್ಯೋತಿಬಾ ಫುಲೆ ಅವರೊಂದಿಗೆ ಸೇರಿ 1848ರಲ್ಲಿ ಪುಣೆಯಲ್ಲಿ ಬಾಲಕಿಯರಿಗಾಗಿ ಮೊದಲ ಶಾಲೆಯನ್ನು ಆರಂಭಿಸಿದರು. ಆ ಕಾಲದಲ್ಲಿ ಮಹಿಳೆಯರ ಶಿಕ್ಷಣಕ್ಕೆ ತೀವ್ರ ವಿರೋಧ ಇದ್ದರೂ, ಅವಮಾನ, ಕಲ್ಲು ಎಸೆತಗಳನ್ನು ಸಹಿಸಿಕೊಂಡು ಸಾವಿತ್ರಿಬಾಯಿ ಶಿಕ್ಷಣದ ದೀಪ ಬೆಳಗಿಸಿದರು.
ವಿಧವಾ ಪುನರ್ವಿವಾಹ, ಬಾಲ್ಯವಿವಾಹ ವಿರೋಧ, ಅಸ್ಪೃಶ್ಯತೆ ನಿರ್ಮೂಲನೆಗೆ ಅವರು ಶ್ರಮಿಸಿದರು. ಕವಯತ್ರಿಯೂ ಆಗಿದ್ದ ಸಾವಿತ್ರಿಬಾಯಿ ಫುಲೆಯವರ “ಕಾವ್ಯಫುಲೆ” ಪ್ರಸಿದ್ಧ ಕೃತಿಯಾಗಿದೆ ಎಂದು ಸ್ಮರಿಸಲಾಯಿತು.
ಚಾಮರಾಜ ಕ್ಷೇತ್ರದ ಬಿಜೆಪಿ ಎಸ್.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೆ.ಗಿರೀಶ್, ನಗರ ಬಿಜೆಪಿ ಎಸ್ ಟಿ ಮೋರ್ಚಾ ಅದ್ಯಕ್ಷರಾದ ಎಂ ರಾಮಕೃಷ್ಣ, ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷರಾದ ರಾಕೇಶ್ ಭಟ್, ಕೃಷ್ಣನಾಯಕ, ಶಿವು ಪಟೇಲ್, ಎಸ್.ತ್ಯಾಗರಾಜ್, ಡಿ.ರಾಘವೇಂದ್ರ, ನಂದೀಶ್ ನಾಯಕ, ಟಿ. ರಾಜನಾಯಕ, ಉದ್ಬೂರು ಉಮೇಶ್, ಪಿ. ಸೋಮಣ್ಣ, ರಂಗೇಶ್, ಸಿ.ಲೋಕೇಶ್, ದಂಡನಾಯಕ ಮತ್ತಿತರ ಕಾರ್ಯಕರ್ತರು ಭಾಗವಹಿಸಿದ್ದರು.
