ಪಿರಿಯಾಪಟ್ಟಣ: ಕೇಂದ್ರ ಸರ್ಕಾರ ವಿದ್ಯುತ್ ಖಾಸಗಿಕರಣ ಮಾಡಿರುವುದನ್ನು
ಮೈಸೂರು ಜಿಲ್ಲೆ ಪಿರಿಯಪಟ್ಟಣ ತಾಲೂಕಿನ ರೈತ ಸಂಘ ಹಸಿರು ಸೇನೆ ಖಂಡಿಸಿದೆ.
ಕೇಂದ್ರ ಸರ್ಕಾರ ವಿದ್ಯುತ್ ಖಾಸಗಿಕರಣ ಮಾಡಿರುವುದರಿಂದ ರಾಜ್ಯದ ಮೂಲೆ ಮೂಲೆಯಿಂದ ವಿರೋಧದ ಧ್ವನಿ ಕೇಳುತ್ತಿದೆ.ಕೂಡಲೇ ರೈತರಿಗೆ ಮತ್ತು ನೌಕರರಿಗೆ ತೊಂದರೆಯಾಗದಂತೆ ವಿದ್ಯುತ್ ಖಾಸಗಿಕರಣ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ತಾಲೂಕು ಕಚೇರಿ ಮುಂದೆ ಧರಣಿ ನಡೆಸಿದ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು,
ಕೂಡಲೇ ಖಾಸಗೀಕರಣ ವಜಗೊಳಿಸಿ ಎಂದಿನಂತೆ ಇರಬೇಕು ಎಂದು ತಾಲೂಕು ಕಚೇರಿಗೆ ಮನವಿ ಪತ್ರ ಸಲ್ಲಿಸಿದರು.
ಧರಣಿಯಲ್ಲಿ ರಾಜ್ಯ ಅಧ್ಯಕ್ಷರಾದ ಆರ್ ಮಂಜುನಾಥ್ ಗೌಡ್ರು, ಆನಂದ್ಗೆರೆ ಯೂತ್ ಸೇನೆ ಅಧ್ಯಕ್ಷರಾದ ಸೋಮೇಗೌಡರು, ಮಹಿಳಾ ತಾಲೂಕು ಅಧ್ಯಕ್ಷರಾದ ಕಾವೇರಮ್ಮ ಬೈದಿಲಮನೆ, ತಾಲೂಕು ಅಧ್ಯಕ್ಷರಾದ ಪ್ರಕಾಶ್, ಉಪಾಧ್ಯಕ್ಷರಾದ ಪ್ರಭು, ತಾಲೂಕು ಸಂಚಾಲಕರಾದ ಕೋಣಸೂರು ಶಿವರಾಜ್, ಕಾರ್ಯದರ್ಶಿಗಳಾದ ಸುರೇಶ, ಅಧ್ಯಕ್ಷರಾದ ಯೋಗಣ್ಣ, ಉಪಾಧ್ಯಕ್ಷ ನಾಗೇಂದ್ರ, ಮಹಾದೇವ್ ಕೆ ಎಸ್ ಚಂದ್ರಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.
