ಮೈಸೂರು: ಜೂಜಾಟ ನಡೆಸುವುದು ಹಾಗೂ ರೌಡಿಸಂ ಮೂಲಕ ಸಾರ್ವಜನಿಕವಾಗಿ ಭಂಗ ತರುತ್ತಿದ್ದ ರೌಡಿ ಶ್ರೀನಿವಾಸನನ್ನು ಮೈಸೂರು ಜಿಲ್ಲೆಯಿಂದ ಹಾಸನ ಜಿಲ್ಲೆ, ಸಕಲೇಶಪುರಕ್ಕೆ ಗಡಿಪಾರು ಮಾಡಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.
ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹದಿನಾರು ಮೊಳೆ ಗ್ರಾಮದ ಶ್ರೀನಿವಾಸ್ @ ದೇವ (47)ನನ್ನು ಗಡಿಪಾರಾಗಿದ್ದಾನೆ.
ಈತ ಸಾಕಷ್ಟು ಕಡೆಗಳಲ್ಲಿ ಜೂಜಾಟ ನಡೆಸುವುದು, ಬಡ್ಡಿಗೆ ಸಾಲ ಕೊಡುವುದು, ಚಿನ್ನದ ಪದಾರ್ಥಗಳನ್ನು ಗಿರವಿಗೆ ಇಟ್ಟುಕೊಂಡು ಹೆಚ್ಚಿನ ಬಡ್ಡಿ ವಸೂಲಿ ಮಾಡುವುದು ಸೇರಿದಂತೆ ರೌಡಿ ಚಟುವಟಿಕೆಗಳಲ್ಲಿ ತೊಡಗಿ ಸಾರ್ವಜನಿಕ ವ್ಯವಸ್ಥೆಗೆ ಭಂಗ ತರುವ ಕೆಲಸ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳು ಗಡಿಪಾರು ಕ್ರಮ ಕೈಗೊಂಡಿದ್ದಾರೆ.
ಮೂರು ತಿಂಗಳ ಅವಧಿಗೆ ಮೈಸೂರು ಜಿಲ್ಲೆಯಿಂದ ಈತನನ್ನು ಬಹಿಷ್ಕರಿಸಿ ಗಡಿಪಾರು ಮಾಡಲಾಗಿದೆ ಎಂದು ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.
