ಮೈಸೂರು: ಅಧಿಕ ಮಾಸ ಮಹೋತ್ಸವದ ಪ್ರಯುಕ್ತ ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳ್ ಅವರು ಮೈಸೂರಿಗೆ ಆಗಮಿಸಿದ್ದಾರೆ.
ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳ್ ಅವರನ್ನು ಕೃಷ್ಣರಾಜ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಗೂ ಅಖಿಲ ಭಾರತೀಯ ಬ್ರಾಹ್ಮಣ ಏಕೀಕೃತ ಪರಿಷತ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಎನ್.ಎಂ.ನವೀನ್ ಕುಮಾರ್ ಅವರು ಭೇಟಿಯಾಗಿ ವಂದಿಸಿದರು.ಶ್ರೀಗಳು ಅವರಿಗೆ ಆಶೀರ್ವದಿಸಿ ದರು.
ಈ ಸಂದರ್ಭದಲ್ಲಿ ಉತ್ತರಾದಿ ಮಠದ ವ್ಯವಸ್ಥಾಪಕರಾದ ಪಂಡಿತ್ ಅನಿರುದ್ದಚಾರ್ಯ ಪಾಂಡುರಂಗಿ, ಶ್ರೀ ಮಠದ ಶಿಷ್ಯರು ಮತ್ತು ವಿಪ್ರ ಮುಖಂಡರು ಆದ ಎಸ್.ಬಿ.ವಾಸುದೇವ ಮೂರ್ತಿ,ಎನ್.ಎಂ.ಪ್ರವೀಣ್ ಕುಮಾರ್,ವಿಪ್ರ ಮುಖಂಡರಾದ ಆರ್.ಎಸ್.ಸತ್ಯನಾರಾಯಣ,ಶ್ರೀಕಾಂತ್ ಮತ್ತಿತರರು ಹಾಜರಿದ್ದರು.
