ಮೈಸೂರು: ಮೈಸೂರು ಜಿಲ್ಲಾ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಖಜಾಂಚಿಯಾಗಿ
ನಂಜನಗೂಡು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಿ.ಆರ್. ದಿನೇಶ್ ಆಯ್ಕೆಯಾಗಿದ್ದಾರೆ.
ಪ್ರಾಂಶುಪಾಲರಾದ ಸಿ.ಆರ್. ದಿನೇಶ್ ಅವರನ್ನು ಕಾಲೇಜಿನ ಸಹೋದ್ಯೋಗಿಗಳು ಆತ್ಮೀಯವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಂಗಸ್ವಾಮಿ ಅವರು,ಸಿ.ಆರ್. ದಿನೇಶ್ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಸಮರ್ಪಣಾ ಭಾವದಿಂದ ಕಾರ್ಯನಿರ್ವಹಿಸುತ್ತಿದ್ದು, ಸಂಘದ ಖಜಾಂಚಿಯಾಗಿ ಆಯ್ಕೆಯಾಗಿರುವುದು ಕಾಲೇಜಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಶ್ಲಾಘಿಸಿದರು.
ಅವರ ಪ್ರಾಮಾಣಿಕತೆ, ಆಡಳಿತಾತ್ಮಕ ಸಾಮರ್ಥ್ಯ ಹಾಗೂ ಸಂಘಟನಾ ಕೌಶಲ್ಯದಿಂದ ಸಂಘದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಲಿದ್ದಾರೆ ಎಂದು ರಂಗಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿ.ಆರ್. ದಿನೇಶ್ ಅವರು, ತಮ್ಮ ಮೇಲೆ ವಿಶ್ವಾಸವಿಟ್ಟು ಜವಾಬ್ದಾರಿ ನೀಡಿದ ಸಂಘದ ಪದಾಧಿಕಾರಿಗಳು ಹಾಗೂ ಶುಭ ಹಾರೈಸಿದ ಸಹೋದ್ಯೋಗಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಸಂಘದ ಆರ್ಥಿಕ ನಿರ್ವಹಣೆಯನ್ನು ಪಾರದರ್ಶಕವಾಗಿ ಹಾಗೂ ಜವಾಬ್ದಾರಿಯುತವಾಗಿ ನಿರ್ವಹಿಸಿ, ಸಂಘದ ಪ್ರಗತಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ಎಸ್ ಲಿಂಗಣ್ಣ ಸ್ವಾಮಿ,ಹೆಚ್ ಕೆ. ಪ್ರಕಾಶ್,ಡಾ. ಕೆ ಮಾಲತಿ, ಡಾ ಸುಮಾ, ಸ್ವಾಮಿ ಗೌಡ ,ಭವ್ಯ ,ರೂಪ ,
ರಾಮಾನುಜಂ , ರವಿ, ಸುಮಿತ್ರ,ನಾಗರಾಜು, ಅಂಬಿಕಾ, ಪದ್ಮಾವತಿ, ದಿನೇಶ್, ಹರೀಶ್, ನಾಗರಾಜರೆಡ್ಡಿ, ಆದಿಲ್ ಹುಸೇನ್, ಮೀನಾ, ವತ್ಸಲ, ಮಿಲ್ಟನ್ ಉಪಸ್ಥಿತರಿದ್ದರು.
