ಮೈಸೂರು: ಪ್ರತಾಪ್ ಸಿಂಹ ಬಳಗದ ವತಿಯಿಂದ ಮಂಗಳವಾರ ಜಗನ್ಮೋಹನ ಅರಮನೆ ಮುಂಭಾಗ ಪೌರಕಾರ್ಮಿಕರೊಂದಿಗೆ ಸಂಕ್ರಾಂತಿ ಹಬ್ಬ ಆಚರಿಸಿ ಮಾದರಿಯಾಗಿದ್ದಾರೆ.
ಸಂಕ್ರಾಂತಿ ಹಬ್ಬದ ಪ್ರಯುಕ್ತ ಎಳ್ಳು ಬೆಲ್ಲ ಸ್ವೆಟರ್ ವಿತರಿಸಿ ಪೌರಕಾರ್ಮಿಕರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮಂಡಿಸಲಾಯಿತು.
ಈ ವೇಳೆ ಮಾತನಾಡಿದ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಅವರು,
ಪೌರ ಕಾರ್ಮಿಕ ಮಹಿಳೆಯರು ತಮ್ಮ ಕುಟುಂಬದ ನಿರ್ವಹಣೆಯ ಜವಾಬ್ದಾರಿಯೊಂದಿಗೆ ಜನರ ಆರೋಗ್ಯ ಸುರಕ್ಷತೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಈ ಸಹೋದರಿಯರಿಗೆ ಬಾಗಿನ ನೀಡಿದ್ದು ಒಳ್ಳೆಯದು, ಇದನ್ನು ಪ್ರತಿವರ್ಷ ಮುಂದುವರಿಸಲಿ,
ಇಂತಹ ಮೌಲ್ಯಯುತ ಸೇವೆ ಖುಷಿ ನೀಡಿದ್ದು, ನಮಗಾಗಿ ದುಡಿಯುವ ಪೌರಕಾರ್ಮಿಕ ಮಹಿಳೆಯರ ಮನ-ಮೊಗದಲ್ಲಿ ಸಂತಸ ಮೂಡಿರುವುದು ಸಾರ್ಥಕ ತರಿಸಿದೆ ಎಂದು ತಿಳಿಸಿದರು.
ಬಿಜೆಪಿ ಮುಖಂಡರಾದ ಎಸ್ ಕೆ ದಿನೇಶ್, ನಗರ ಪಾಲಿಕೆ ಮಾಜಿ ಸದಸ್ಯರಾದ ಬೊ ಉಮೇಶ್, ಕಾರ್ಯಕ್ರಮದ ಆಯೋಜಕರಾದ ಆರ್ ಪರಮೇಶ್ ಗೌಡ, ಪ್ರಮೋದ್ ಗೌಡ,ಚೇತನ್ ಗೌಡ,ಸಂದೇಶ್ ಪವಾರ್ ,ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಖಜಾಂಜಿ ನಾಗರಾಜ್, ಮಂಜುನಾಥ್, ಗಾಣಿಗ ಸಮುದಾಯದ ಮುಖಂಡರಾದ ರಾಜು, ಭಾನುಮತಿ,ಗೀತಾ, ಮಧು, ವಿ ಎಸ್ ಕಿರಣ್, ಶ್ರವಣ್ ಮಾಲಿ , ಮಡಿವಾಳ ನಾಗೇಶ್,ಸಾಗರ್, ರಾಜು ಮತ್ತಿತರರು ಹಾಜರಿದ್ದರು.
