ಉಡುಪಿ: ಜಿಲ್ಲೆಯ ಶಂಕರಪುರ ಗ್ರಾಮದ ಸರ್ವಕಲ ಸೇವಾ ಟ್ರಸ್ಟ್ ಅಧ್ಯಕ್ಷರೂ, ಒಂದು ಹೆಜ್ಜೆ ರಕ್ತದಾನಿಗಳ ಬಳಗ ಉಡುಪಿ ಜಿಲ್ಲೆಯ ಅಧ್ಯಕ್ಷರಾದ ನೀಮ ಲೋಬೊ 9ನೇ ಬಾರಿ ರಕ್ತದಾನ ಮಾಡಿ ಮಾದರಿಯಾಗಿದ್ದಾರೆ.
ನೀಮಾ ಲೋಬೊ ಅವರಿಗೆ ಒಂದು ಹೆಜ್ಜೆ ರಕ್ತದಾನಿ ಬಳಗದ ವತಿಯಿಂದ ಅಭಿನಂದನೆ ತಿಳಿಸಲಾಗಿದೆ.
ಪ್ರತಿಯೊಬ್ಬರು ರಕ್ತದಾನ ಮಾಡಿ ಜೀವ ಉಳಿಸಿ ನಮ್ಮ ಜೊತೆ ಕೈಜೋಡಿಸಿ ಎಂದು
ರಕ್ತದಾನಿ ಮಂಜು ಮನವಿ ಮಾಡಿದ್ದಾರೆ.
