ಮೈಸೂರು: ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಸಾರ್ವಜನಿಕರಿಗೆ ಇ-ಖಾತಾ ಸೇವೆಯನ್ನು ತ್ವರಿತವಾಗಿ ಒದಗಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಪ್ರಜಾಸೇವಾ ವಿಶೇಷ ಇ-ಖಾತಾ ಆಂದೋಲನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಈ ಆಂದೋಲನದಲ್ಲಿ ನಗರದ 9 ವಲಯಗಳಿಂದ ಒಟ್ಟು 708 ಅರ್ಜಿಗಳು ಸ್ವೀಕೃತವಾಗಿವೆ.
ವಲಯವಾರು ಅರ್ಜಿಗಳ ವಿವರ:
ವಲಯ 1 – 55 ಅರ್ಜಿಗಳು
ವಲಯ 2 – 124 ಅರ್ಜಿಗಳು
ವಲಯ 3 – 144 ಅರ್ಜಿಗಳು
ವಲಯ 4 – 44 ಅರ್ಜಿಗಳು
ವಲಯ 5 – 48 ಅರ್ಜಿಗಳು
ವಲಯ 6 – 44 ಅರ್ಜಿಗಳು
ವಲಯ 7 – 82 ಅರ್ಜಿಗಳು
ವಲಯ 8 – 69 ಅರ್ಜಿಗಳು
ವಲಯ 9 – 91 ಅರ್ಜಿಗಳು
ಒಟ್ಟು – 708 ಅರ್ಜಿಗಳು
ಸ್ವೀಕೃತವಾದ ಅರ್ಜಿಗಳ ಪರಿಶೀಲನೆಯ ಸಂದರ್ಭದಲ್ಲಿ ಅಗತ್ಯ ದಾಖಲೆಗಳು ಲಭ್ಯವಿಲ್ಲದ ಅಥವಾ ದಾಖಲೆಗಳಲ್ಲಿ ಲೋಪಗಳಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಅರ್ಜಿದಾರರಿಗೆ ಸೂಕ್ತ ಹಿಂಬರಹ ನೀಡಲಾಗುತ್ತದೆ.
ನಿಯಮಾನುಸಾರ ಅಗತ್ಯ ದಾಖಲೆಗಳನ್ನು ಹೊಂದಿರುವ ಮತ್ತು ಇಸಿ ಹಾಜರುಪಡಿಸಿರುವ ಅರ್ಹ ಅರ್ಜಿಗಳಿಗೆ ಅ. 31, ಶನಿವಾರ ಸಂಜೆ 4 ಗಂಟೆಯೊಳಗೆ ಇ-ಖಾತಾ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.
ಇ-ಖಾತಾ ಸೇವೆಯನ್ನು ಸರಳೀಕರಿಸಿ, ತ್ವರಿತವಾಗಿ ಸಾರ್ವಜನಿಕರಿಗೆ ತಲುಪಿಸುವ ಉದ್ದೇಶದಿಂದ ಮೈಸೂರು ಮಹಾನಗರ ಪಾಲಿಕೆಯು ಈ ವಿಶೇಷ ಆಂದೋಲನವನ್ನು ಹಮ್ಮಿಕೊಂಡಿದ್ದು, ನಾಗರಿಕರಿಗೆ ಪರಿಣಾಮಕಾರಿ ಸೇವೆ ಒದಗಿಸಲು ಕ್ರಮವಹಿಸಲಾಗಿದೆ ಎಂದು ಪಾಲಿಕೆ ಆಯುಕ್ತೆ ಎಂ.ಕೆ. ಸವಿತಾ ತಿಳಿಸಿದ್ದಾರೆ.
