ಬೆಂಗಳೂರು: ಮೋನಿಶ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಟ್ರಸ್ಟ್ ನ 5 ನೆ ವಾರ್ಷಿಕೋತ್ಸವ ಹಾಗೂ ಮೋನಿಶ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಯುವ ಮಾಣಿಕ್ಯ ಮೋನಿಶ್ ಪ್ರಶಸ್ತಿ 2026 ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಈ ಸಮಾರಂಭವು ನವೆಂಬರ್ 15ರಂದು ಭಾನುವಾರ ಬೆಳಗ್ಗೆ 9:30ಕ್ಕೆ ಬೆಂಗಳೂರು, ಚಾಮರಾಜಪೇಟೆ, ಕನ್ನಡ ಸಾಹಿತ್ಯ ಪರಿಷತ್ ನ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆಯಲಿದೆ.
ಈ ವೇಳೆ ನಮ್ಮ ದೇಶದ ಬೆನ್ನೆಲುಬು ನಮ್ಮ ಅನ್ನದಾತರಿಗೆ ಯುವ ಮಾಣಿಕ್ಯ ಮೋನೀಶ್ 2026 ನೆ ಸಾಲಿನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಯುವ ಮಾಣಿಕ್ಯ ಮೋನೀಶ್ 2026 ನೆ ಸಾಲಿನ ಪ್ರಶಸ್ತಿಗೆ ಕರ್ನಾಟಕ ರಾಜ್ಯ ರೈತ ಸಂಘ ಮೂಲ ಸಂಘಟನೆ ಮೈಸೂರು ಜಿಲ್ಲಾಧ್ಯಕ್ಷರಾದ ಬನ್ನೂರು ನಾರಾಯಣ್ ಅವರು ಭಾಜನರಾಗಿದ್ದಾರೆ.
ಈ ಸಮಾರಂಭದಲ್ಲಿ ಅನೇಕ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ತುರಗನೂರು ಆಯುರ್ವೇದಿಕ್ ಕ್ಲಿನಿಕ್ ವ್ಯವಸ್ಥಾಪಕರಾದ ಮಮತಾ ಕೆ ಎಸ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಮೋನಿಶ್ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರಾದ ಗೀತಾ ರೆಡ್ಡಿ ಎಸ್.ಆರ್ ಹಾಗೂ ಉಪಾಧ್ಯಕ್ಷರಾದ ಅಕ್ಷಯ್ ಎಸ್.ರೆಡ್ಡಿ ತಿಳಿಸಿದ್ದಾರೆ.
