ಮೈಸೂರು: ರಾಜಮನೆತನದ ವಿರುದ್ಧ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆಯನ್ನು ಖಂಡಿಸಿ ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಸಾವಿರಾರು ಮಂದಿ ಪ್ರತಿಭಟನೆ ನಡೆಸಿದರು.
ರಾಜಮನೆತನದ ಪರವಾಗಿ ನಡೆದ ಈ ಪ್ರತಿಭಟನೆಯಲ್ಲಿ ಎಲ್ಲಾ ಜಾತಿ ಧರ್ಮದವರು ಬೇಧವಿಲ್ಲದೆ ಕನ್ನಡದ ಶಾಲು ಹಾಕಿಕೊಂಡು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಇತಿಹಾಸಕ್ಕೆ ಅಪಮಾನ ಬೇಡ, ರಾಜರ ಕೊಡುಗೆ ಸ್ಮರಿಸೋಣ, ರಾಜಮನೆತನವಿಲ್ಲದೆ ಮೈಸೂರಿಲ್ಲ, ಮೈಸೂರಿಲ್ಲದೆ ನಾವಿಲ್ಲ ಎಂಬ ಭಿತ್ತಿಪತ್ರ ಗಳನ್ನು ಪ್ರದರ್ಶಿಸಿದರು.
ಸಚಿವ ಯತೀಂದ್ರ ಸಿದ್ದರಾಮಯ್ಯ ಅವರ ಭಾವಚಿತ್ರಕ್ಕೆ “ಎಲುಬಿಲ್ಲದ ನಾಲಿಗೆ” ಎಂಬ ಬರಹ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಮೈಸೂರು ನಮ್ಮ ಹೆಮ್ಮೆ, ರಾಜಪರಂಪರೆ ನಮ್ಮ ಗೌರವ, ನಮ್ಮ ಸಂಪೂರ್ಣ ಬೆಂಬಲ ರಾಜಮನೆತನಕ್ಕೆ ಎಂದು ಘೋಷಣೆಗಳನ್ನು ಕೂಗಿ ಸಚಿವ ಯತೀಂದ್ರ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
