ಫಿಲಿಪೈನ್ಸ್: ಉಷ್ಣವಲಯದ ಭೀಕರ ಟ್ರಾಮಿ ಚಂಡಮಾರುತ ಫಿಲಿಪೈನ್ಸ್ನ ಲುಝೋನ್ ಮತ್ತು ಬಿಕೋಲ್ ದ್ವೀಪ ವಲಯಗಳ ಮೇಲೆ ಅಪ್ಪಳಿಸಿದ್ದು ಸಾವುನೋವು ಹೆಚ್ಚಾಗಿದೆ.
ಚಂಡಮಾರುತ ತಂದ ಭಾರಿ ಮಳೆ ಜ್ವಾಲಾಮುಖಿಯಿಂದಾಗಿ ಇದುವರೆಗೆ ಕನಿಷ್ಠ 110 ರಿಂದ 150 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ಮೂಲಗಳು ವರದಿ ಮಾಡಿವೆ.
ಗಂಟೆಗೆ 95 ಕಿಮೀ ವೇಗದ ಗಾಳಿಯೊಂದಿಗೆ ಕೇವಲ 24 ಗಂಟೆಗಳಲ್ಲಿ ಒಂದು ತಿಂಗಳ ಸರಾಸರಿ ಮಳೆ ಸುರಿದಿದೆ. ಇದರಿಂದ ನೂರಾರು ಹಳ್ಳಿಗಳು ಮುಳುಗಡೆಯಾಗಿದೆ.
ದೇಶದ 20 ಲಕ್ಷಕ್ಕೂ ಅಧಿಕ ಜನರು ಈ ವಿಕೋಪದಿಂದ ಸಂಕಷ್ಟಕ್ಕೆ ಈಡಾಗಿದ್ದು, ಶಾಲೆ ಮತ್ತು ಕಚೇರಿಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.
