ಚಾಮರಾಜನಗರ: ಕಾರು ಡಿಕ್ಕಿ ಹೊಡೆದ ಪರಿಣಾಮ ವೃದ್ಧೆ ಮೃತಪಟ್ಟ ಘಟನೆ ನಗರದ ಸಂತೇಮರಹಳ್ಳಿ ವೃತ್ತದಲ್ಲಿ ನಡೆದಿದೆ.
ನಗರದ ರೈಲ್ವೆ ಬಡಾವಣೆಯ ದುಂಡಮ್ಮ(60) ಮೃತಪಟ್ಟ ಮಹಿಳೆ.
ಇವರು ಸಂತೇಮರಹಳ್ಳಿ ವೃತ್ತದ ಬಳಿ ನಿಂತಿದ್ದಾಗ ನಂಜನಗೂಡು ಕಡೆಯಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದ ಕಾರಣ ಸ್ಥಳದಲ್ಲೇ ವೃದ್ದೆ ಮೃತಪಟ್ಟಿದ್ದಾರೆ.
ಕಾರಿನ ಚಾಲಕ ವಾಹನ ನಿಲ್ಲಿಸದೇ ಪರಾರಿಯಾಗಿದ್ದಾನೆ. ಆ ಕಾರನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗಿದ್ದು, ಮೃತದೇಹವನ್ನು ಸಿಮ್ಸ್ ಆಸ್ಪತ್ರೆಯ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಒಪ್ಪಿಸಲಾಯಿತು.
ಈ ಸಂಬಂಧ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
