ಮೈಸೂರು: ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ವಿದ್ಯಾರ್ಥಿ ಕ್ಷೇಮಪಾಲನೆ ಸಮಿತಿ, ಲೈಂಗಿಕ ಕಿರುಕುಳ ತಡೆ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ ಸಂಯುಕ್ತ ಆಶ್ರಯದಲ್ಲಿ ಪಿ ಸಿ ಒ ಡಿ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಡಾ. ತೇಜಸ್ವಿನಿ ಅವರು ಉಪನ್ಯಾಸ ನೀಡಿ ಪಿ ಸಿ ಒಡಿ ಸಮಸ್ಯೆಗೆ ಕಾರಣಗಳು, ಲಕ್ಷಣಗಳು, ಪರಿಣಾಮಗಳು ಹಾಗೂ ಚಿಕಿತ್ಸೆ ಕುರಿತು ವಿವರವಾಗಿ ತಿಳಿಸಿದರು.
ಹೆಣ್ಣುಮಕ್ಕಳಲ್ಲಿ ಕಾಣಿಸಿಕೊಳ್ಳುವ ಈ ಸಮಸ್ಯೆ ಬಗ್ಗೆ ಎಚ್ಚರದಿಂದಿರಿ ಎಂದು ಕಿವಿ ಮಾತು ಹೇಳಿದರು.
ಡಾ. ಆಯೀಷಾ ಅಮ್ರಿತ್ ಮಾತನಾಡಿ,
ಯುವತಿಯರಲ್ಲಿ ಹಾರ್ಮೋನ್ ಅಸಮತೋಲನ, ಆಸಮಯದ ಮಾಸಿಕ ಚಕ್ರ, ತೂಕ ಹೆಚ್ಚಳ, ಮೊಡವೆ, ಕೂದಲು ಉದುರುವಿಕೆ ಮುಂತಾದ ಸಮಸ್ಯೆಗಳ ಬಗ್ಗೆ ವಿವರಿಸಿದರು.
ಸಮತೋಲನ ಆಹಾರ, ನಿಯಮಿತ ವ್ಯಾಯಾಮ, ಯೋಗಾಭ್ಯಾಸ ಹಾಗೂ ಮಾನಸಿಕ ಒತ್ತಡ ನಿಯಂತ್ರಣದ ಅಗತ್ಯತೆಯನ್ನು ಒತ್ತಿಹೇಳಿದರು. ಸಮಯಕ್ಕೆ ಸರಿಯಾಗಿ ವೈದ್ಯಕೀಯ ಸಲಹೆ ಪಡೆಯುವಂತೆ ಸಲಹೆ ನೀಡಿದರು.
ವಿದ್ಯಾರ್ಥಿನಿಯರು ಮತ್ತು ಮಹಿಳಾ ಅಧ್ಯಪಕರು ಹಾಗು ಅಧ್ಯಪಕೇತರರ ಜತೆ ಸಂವಹನ ಕಾರ್ಯಕ್ರಮ ನಡೆಯಿತು.
ನಿರೂಪಣೆಯನ್ನು 3ನೇ ಬಿ.ಎಸ್.ಸಿ ವಿದ್ಯಾರ್ಥಿನಿ ಬೃಂದಾ ಎ. ನಿರ್ವಹಿಸಿದರು. ವಿಂದ್ಯಲಕ್ಷ್ಮಿ ಎಸ್. ಕೊಣ್ಣೂರು ಪ್ರಾರ್ಥನೆ ಮಾಡಿದರು.
ವಿದ್ಯಾರ್ಥಿ ಕ್ಷೇಮಪಾಲನೆ ಸಮಿತಿಯ ಸಂಯೋಜಕರಾದ ಡಾ. ಪ್ರೀತಿ ಎನ್. ತಲ್ಲೂರು ಅವರು ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು.
ಅತಿಥಿಗಳ ಪರಿಚಯವನ್ನು 3ನೇ ಬಿ.ಎಸ್.ಸಿ ವಿದ್ಯಾರ್ಥಿನಿಯರಾದ ಚೈತನ್ಯ ಟಿ.ಕೆ.ಹಾಗೂ ಪ್ರಕೃತಿ ಎಚ್.ಕೆ. ಅವರು ಮಾಡಿದರು. 3ನೇ ಬಿ.ಎಸ್.ಸಿ ವಿದ್ಯಾರ್ಥಿನಿ ಜಾಹ್ನವಿ ಎ.ಎಸ್. ವಂದನಾರ್ಪಣೆ ಸಲ್ಲಿಸಿದರು.
ಸುಮಾರು 350 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅರೋಗ್ಯ ತಪಾಷಣೆ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಅಬ್ದುಲ್ ರಹಿಮಾನ್ ಎಂ. ಅವರು ವಹಿಸಿದ್ದರು.
IQAC ಸಂಯೋಜಕರಾದ ಡಾ. ನಂದಕುಮಾರ್ ವಿ. ಅಧ್ಯಪಕರಾದ ರಾಜೇಶ್ವರಿ,ಬೃಂದಾ ಎನ್, ಸುಧಾ ಎಂ.ಸಿ., ಲೀಲಾವತಿ ಎನ್.ಕೆ., ಮಮತಾ ಎಂ., ಡಾ. ಲಕ್ಷ್ಮಿ ಎಂ ಪಲ್ಲೋಟಿ ಹಾಗೂ ಸಿದ್ದುರಾಜು ಸಿ ಉಪಸ್ಥಿತರಿದ್ದರು.
