ಲೂಧಿಯಾನ: ಕಳೆದ ಐದು ದಿನಗಳ ಹಿಂದೆ ಅಪಹರಣವಾಗಿದ್ದ ಖ್ಯಾತ ಪಂಜಾಬಿ ಗಾಯಕಿ ಮತ್ತು ಮೇಕಪ್ ಕಲಾವಿದೆ ಇಂದರ್ ಕೌರ್ (ಯಶಿಂದರ್ ಕೌರ್)ಶವವಾಗಿ ಪತ್ತೆಯಾಗಿದ್ದಾರೆ.
ಪಂಜಾಬ್ನ ನೀಲೋ ಕಾಲುವೆಯಿಂದ ಗಾಯಕಿಯ ದೇಹವನ್ನು ಹೊರತೆಗೆಯಲಾಗಿದೆ.
ಲೂಧಿಯಾನದಲ್ಲಿ ಅಪಹರಣದ ನಂತರ ಅವರು ಕಾಣೆಯಾಗಿದ್ದಾರೆ ಎಂದು ವರದಿಯಾಗಿತ್ತು. ಸುಮಾರು ಒಂದು ವಾರದ ನಂತರ ಅವರ ದೇಹ ಕಾಲುವೆಯಲ್ಲಿ ಸಿಕ್ಕಿದೆ.
ಮೇ 19 ರಂದು ಅವರ ಮೃತದೇಹ ಪತ್ತೆಯಾಗಿದ್ದು,ಮಗಳನ್ನು ಕೊಲೆ ಮಾಡಲಾಗಿದೆ ಎಂದು ಕುಟುಂಬವು ಆರೋಪಿಸಿದೆ.
1997 ರಲ್ಲಿ ಜನಿಸಿದ ಇಂದರ್ ಕೌರ್ ಪಂಜಾಬ್ ಮೂಲದ ಗಾಯಕಿ ಮತ್ತು ಮೇಕಪ್ ಕಲಾವಿದೆ, ಪಂಜಾಬಿ ಸಂಗೀತ ಉದ್ಯಮದಲ್ಲಿ ಒಳ್ಳೆಯ ಹೆಸರು ಮೂಡಿಸಿದ್ದಾರೆ.
ಅಫ್ಘಾನ್ ಜಟ್ಟಿ, ಸೋಹ್ನಾ ಲಗ್ಡಾ, ಲಾನೆದಾರ್ನಿ, ದೇಸಿ ಸಿರ್ರೆ ದೇ,’ಸೋನೆ ದಿ ವಾಂಗ್’, ‘ಕಿಸಾನ್ ಆಂಥೆಮ್’, ‘ಜಿಜಾ’, ‘ರಿಚ್ ಸ್ಟ್ಯಾಂಡರ್ಡ್’, ‘ಆಕಾಡ್’ ಮತ್ತು ‘ಕಡೋ ತಿ ಮಿಲೇಗಿ’ ಸೇರಿದಂತೆ ಅನೇಕ ಹಾಡುಗಳನ್ನು ಬಿಡುಗಡೆ ಮಾಡಿದ್ದು ಎಲ್ಲವೂ ಹಿಟ್ ಆಗಿವೆ.
ಇಂದರ್ ಕೌರ್ ಮೇ 13 ರಿಂದ ಕಾಣೆಯಾಗಿದ್ದರು. ಮೇ 19 ಮಂಗಳವಾರ ನೀಲೋ ಕಾಲುವೆಯಿಂದ ಅವರ ಶವ ಪತ್ತೆಯಾಗಿದೆ.
ಗಾಯಕಿಯ ಸಹೋದರ ಜೋತಿಂದರ್ ಸಿಂಗ್ ಅವರು ಆಕೆಯ ನಾಪತ್ತೆಯ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಮೇ 15 ರಂದು ಮೋಗಾ ಮೂಲದ ಸುಖ್ವಿಂದರ್ ಸಿಂಗ್ ಅಲಿಯಾಸ್ ಸುಖ ಮದುವೆ ಪ್ರಸ್ತಾಪ ಮಾಡಿದ್ದನು ಅದನ್ನು ಇಂದರ್ ಕೌರ್ ನಿರಾಕರಿಸಿದ್ದರು.ಇದು ಅಪಹರಣ ಮತ್ತು ಕೊಲೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಇಂದರ್ ಕೌರ್ ಅಪಹರಣ ಮತ್ತು ಕೊಲೆಯ ಹಿಂದೆ ಸುಖ್ವಿಂದರ್ ಸಿಂಗ್ ಮನೆಯವರ ಕೈವಾಡವಿದೆ ಎಂಬ ಆರೋಪವಿದೆ,ಹಾಗಾಗಿ ಸುಖ್ವಿಂದರ್ ಸಿಂಗ್ ತಂದೆ ಪರಮ್ ಜಿತ್ಸಿಂಗ್ ಹಾಗೂ ಆತನ ಸಹಚರ ಕರಮ್ ಜಿತ್ ಸಿಂಗ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
